Select Your Language

Notifications

webdunia
webdunia
webdunia
webdunia

ಸಾರಿಗೆ ನೌಕರರ ಪೈಕಿ 4 ಸಾವಿರ ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳುವಂತೆ ಆಗ್ರಹ

ಸಾರಿಗೆ  ನೌಕರರ ಪೈಕಿ 4 ಸಾವಿರ ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳುವಂತೆ ಆಗ್ರಹ
bangalore , ಸೋಮವಾರ, 20 ಸೆಪ್ಟಂಬರ್ 2021 (21:34 IST)
ಬೆಂಗಳೂರು: ಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ವಿಧಾನಸೌಧದಲ್ಲಿ ನಾಲ್ಕು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು  ಸಭೆ ನಡೆಸಿದ ಸಂದರ್ಭ ಅನೇಕ ವಿಚಾರಗಳನ್ನು ಚರ್ಚಿಸಿದ್ದು, ನೌಕರರ ವಿಚಾರವು ಇದರಲ್ಲಿ ಒಂದಾಗಿದೆ. ವಿವಿಧ ಸಂದರ್ಭಗಳಲ್ಲಿ ಪ್ರತಿಭಟನೆ ವೇಳೆ ಅನೇಕರು ಅಮಾನತು, ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. 6 ಸಾವಿರ ನೌಕರರು ಅಮಾನತುಗೊಂಡಿದ್ದರು. ಇವರಲ್ಲಿ 4 ಸಾವಿರ ಮಂದಿಯನ್ನು ಮರಳಿ ಸೇವೆಗೆ ಕರೆಸಿಕೊಂಡಿದ್ದೇವೆ. ಈ ಎಲ್ಲಾ ಆದೇಶವನ್ನು ಮರಳಿ ಪಡೆಯಲಾಗಿದೆ. ಇನ್ನುಳಿದ 2 ಸಾವಿರ ಮಂದಿಯ ಜತೆಗೂ ಚರ್ಚೆ ನಡೆಸುತ್ತೇವೆ ಎಂದು ಎಂದರು.
ಸಂಪರ್ಕದಲ್ಲಿರುವ ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಈವರೆಗೆ ಏನಾಗಿದೆಯೋ ಗೊತ್ತಿಲ್ಲ. ಇನ್ನು ಮುಂದೆ ಯಾವುದೇ ಘಟನೆ ನಡೆಯಬಾರದು. ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ನಾನು ಎಲ್ಲರೂ ಈ ಬಗ್ಗೆ ಮಾತನಾಡಿದ್ದೇವೆ. ಡ್ರೈವರ್ ಆಗಿರಬಹುದು ಅಥವಾ ಕಂಡಕ್ಟರ್ ಆಗಿರಬಹುದು. ನಾಳೆ ಎಲ್ಲರನ್ನೂ ಕರೆದು ತೀರ್ಮಾನ ಮಾಡುತ್ತೇವೆ ಎಂದರು. ಮುಷ್ಕರದಲ್ಲಿ ಪಾಲ್ಗೊಂಡ ನೌಕರರಲ್ಲಿ ನಾನು ಮನವಿ ಮಾಡುತ್ತೇನೆ. ಏನಾದರು ತೊಂದರೆ ಇದ್ದರೆ ನಮ್ಮ‌ಜೊತೆ ಕುಳಿತು ಮಾತನಾಡಿ. ಎಫ್​​ಐಆರ್ ಆಗಿದ್ದವರ ಕುರಿತು ಕಾನೂನು ತಂಡದ ಜತೆ ಮಾತನಾಡುತ್ತೇನೆ. ವೇತನ ವಿಚಾರದಲ್ಲಿ ಯಾವ ತೊಂದರೆಯಾಗದಂತೆ  ನೋಡಿಕೊಳ್ಳುತ್ತೇನೆ. ಸರಿಯಾದ ಸಮಯಕ್ಕೆ ವೇತನ ಆಗುವಂತೆ ನೋಡಿಕೊಳ್ಳುತ್ತೇನೆ. ಇಲಾಖೆ ಸಿಬ್ಬಂದಿ ಪರವಾಗಿ ನಾವಿದ್ದೇವೆ. ಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಠಿಣ ಸಂದರ್ಭದಲ್ಲಿ ನಿರ್ಧಾರ ತೆಗೆದಯಕೊಳ್ಳುವ ಮೊದಲು ಸರ್ಕಾರದ ಜತೆ ಮಾತುಕತೆ ನಡೆಸಬೇಕು. ಅವರಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ. ಇದು ಮುಕ್ತಾಯ ಆಗುವುದಿಲ್ಲ. ಸಾರಿಗೆ ಇಲಾಖೆ ಸಂಬಳ ವಿಚಾರದಲ್ಲಿ ಕರೆಸಿ ಮಾತನಾಡಿದ್ದಾರೆ. ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆ ಮಾಡುತ್ತೇವೆ. ನಾವು ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಬೃಹತ್ ರ‍್ಯಾಲಿ