Select Your Language

Notifications

webdunia
webdunia
webdunia
Saturday, 12 April 2025
webdunia

ಬಿಕ್ಕಿ ಬಿಕ್ಕಿ ಅಳುತ್ತಾ ಮತಯಾಚಿಸಿದ ಅಭ್ಯರ್ಥಿ

ಅಳು
ಮಂಡ್ಯ , ಬುಧವಾರ, 4 ಡಿಸೆಂಬರ್ 2019 (20:37 IST)
ಉಪ ಚುನಾವಣೆ ಪ್ರಚಾರ ಸಮಯದಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಬಿಕ್ಕಿ ಬಿಕ್ಕಿ ಅತ್ತು ಮತಯಾಚನೆ ಮಾಡಿರೋ ಘಟನೆ ನಡೆದಿದೆ.

ಮಂಡ್ಯದ  ಕೆ.ಆರ್.ಪೇಟೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ  ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್.

ದಯಮಾಡಿ ನನ್ನ ಕೈಬಿಡಬೇಡಿ. ನನಗೆ ಮತ ನೀಡಿ ನಿಮ್ಮ ಮನೆಯಾಳಿನಂತೆ ಕೆಲಸ ಮಾಡ್ತೀನಿ. ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ ನನ್ನ ಬಳಿ ಹಣವಿಲ್ಲ. ನಿಮ್ಮ ಸೇವಕನಂತೆ ಕೆಲಸ ಮಾಡಿ ನಿಮ್ಮ ಋಣ ತೀರಿಸ್ತೀನಿ.

ನಿಮ್ಮ ದಮ್ಮಯ್ಯ ಎಂದು ಬಿಕ್ಕಿ ಬಿಕ್ಕಿ ಅತ್ತು ಮತಯಾಚನೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಅನೈತಿಕವಾಗಿ ಶಾಸಕರನ್ನು ಖರೀದಿ ಮಾಡಿ ರಾಜೀನಾಮೆ ಕೊಡಿಸಿ ಅಡ್ಡದಾರಿಯ ಮೂಲಕ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೀಳಿಸಿ ಜನಪರವಾದ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಗೆ ಮತನೀಡಿ ಎಂದು ಕೋರಿದ್ರು.  




Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತನ ಅಪಹರಣ ಯತ್ನ – ಜನರ ಕೈಗೆ ಸಿಕ್ಕಿಬಿದ್ದ ದುಷ್ಕರ್ಮಿಗಳಿಗೆ ಆಗಿದ್ದೇನು?