Publish Date: Tue, 03 Dec 2019 (16:59 IST)
Updated Date: Tue, 03 Dec 2019 (17:01 IST)
ಮಂಡ್ಯದ ಕೃಷ್ಣರಾಜಪೇಟೆಯ ಉಪ ಚುನಾವಣೆಯಲ್ಲಿ ಶತಾಯ ಗತಾಯ ಕಮಲ ಅರಳಿಸಲು ಧೃಡ ಸಂಕಲ್ಪ ಮಾಡಿದೆ ಬಿಜೆಪಿ.
ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ ರಾಜ್ಯ ಬಿಜೆಪಿ ಯುವಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ.
ವಿಶ್ವಕರ್ಮ ಜನಾಂಗದ ಬಂಧುಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ, ಬದಲಾವಣೆಯ ಗಾಳಿ ಬೀಸುತ್ತಿದೆ. ನನ್ನ ತಂದೆಯವರ ಆಸೆ ಈಡೇರಿಸುವ ಸಮಯ ಬಂದಿದೆ. ಯಡಿಯೂರಪ್ಪರ ಜನ್ಮಭೂಮಿಯಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ ಎಂದರು.
ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಕ್ಷೇತ್ರದ ಪ್ರಬುದ್ಧ ಮತದಾರರು ಯಡಿಯೂರಪ್ಪ ಅವರ ಕೈಬಲಪಡಿಸಲು ಬಿಜೆಪಿ ಸರ್ಕಾರದ ಪರವಾಗಿ ಮತನೀಡಿ ನಾರಾಯಣಗೌಡರಿಗೆ ಭರ್ಜರಿ ಗೆಲುವು ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ ಎಂದರು.
ನಾರಾಯಣಗೌಡರನ್ನು ಜನತೆ ಆಶೀರ್ವದಿಸಿ ಶಾಸಕರನ್ನಾಗಿ ಆಯ್ಕೆ ಮಾಡಿದರೆ ನಮ್ಮ ತಂದೆಯವರು ಅವರನ್ನು ಮಂತ್ರಿಯನ್ನಾಗಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಒತ್ತನ್ನು ನೀಡ್ತಾರೆ ಅಂತ ಹೇಳಿದ್ರು.