Select Your Language

Notifications

webdunia
webdunia
webdunia
webdunia

ಬಹುತೇಕ ಎಲ್ಲಾ ಪಕ್ಷದ ಅಭ್ಯರ್ಥಿ ಗಳ ಪ್ರಚಾರ ಕಾರ್ಯ ಶುರು

The campaign work of almost all party candidates has started
bangalore , ಮಂಗಳವಾರ, 11 ಏಪ್ರಿಲ್ 2023 (19:50 IST)
2023 ರ ವಿಧಾನಸಭಾ ‌ಚುನಾವಣೆಗೆ ಈಗಾಗಲೇ ದಿನಾಂಕ ‌ನಿಗಧಿಯಾಗಿದೆ ಈ ಹಿನ್ನೆಲೆ ಬಹುತೇಕ ಎಲ್ಲಾ ಪಕ್ಷದ ಅಭ್ಯರ್ಥಿ ಗಳು  ಪ್ರಚಾರ ಕಾರ್ಯ ಶುರುಮಾಡಿದ್ದಾರೆ.ಇನ್ನೂ  ಬೊಮ್ಮನಹಳ್ಳಿ ‌ವಿಭಾನಸಭಾ ಕ್ಷೇತ್ರದಲ್ಲೂ ಕೂಡ  ಹಾಲಿ‌ ಶಾಸಕ ಎಂ ಸತೀಶ್ ರೆಡ್ಡಿ ಕೂಡ ತಮ್ಮ ಬೆಂಬಲಿಗರೊಂದಿಗೆ ಮತಬೇಟೆ ಶುರುಮಾಡಿದ್ದಾರೆ. ಈಗಾಗಲೇ ಮೂರು ಬಾರಿ ಬಿಜೆಪಿ ಯಿಂದ‌ ಸ್ಫರ್ಧಿಸಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದು ಈ ಬಾರಿ ಕೂಡ ಪ್ರಚಂಡ ಬಹುಮತದೊಂದಿಗೆ ವಿಧಾನಸೌಧ ಪ್ರವೇಶ ಮಾಡುತ್ತೇನೆಂದು ವಿಶ್ವಾಸವ್ಯಕ್ತಪಡಿಸಿದ್ರು. ಕಳೆದ ಹದಿನೈದು‌ ವರ್ಷ ಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇನೆ. ಮತದಾರರು ಕೂಡ ಮೂರು ಬಾರಿ ನನ್ನ ನ ಆಯ್ಕೆ ಮಾಡಿದ್ದಾರೆ ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಎಂದರು. ನಿನ್ನೆ ದೇವರಚಿಕ್ಕನಹಳ್ಳಿಯಲ್ಲಿ ಬಿಜೆಪಿಯ ಮುಖಂಡರ ಜತೆ ಬೈಕ್ ಗಳಲ್ಲಿ  ತೆರಳಿ ಮತಯಾಚನೆ ಮಾಡಿದ್ರು.

ಗ್ರಾಮದ ಪ್ರಮುಖ ಮುಖಂಡರು ಮಾತನಾಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ‌ಕೆಲಸಗಳನ್ನ ಮಾಡಿದ್ದಾರೆ. ಈ ಬಾರಿ ಕೂಡ ನಮ್ಮ ನಾಯಕರಾದ ಸತೀಶ್ ರೆಡ್ಡಿ ಅವರೇ‌ ಜಯಗಳಿಸಿದೋ ಅವರನ್ನ ಪ್ರಚಂಡ ಬಹುಮತಗಳಿಂದ ಜಯಶೀಲರನ್ನಾಗಿ ಮಾಡುತ್ತೇವೆ ಎಂದು ಬೊಮ್ಮನಹಳ್ಳಿ ವಾರ್ಡ್ನ ಅಧ್ಯಕ್ಷ ಮಧುಸೂಧನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ-ಬಿಟಿ ಸಂಸ್ಥೆಗಳ ಜೊತೆ ಮತದಾನ ಜಾಗೃತಿ ಕಾರ್ಯಕ್ರಮ