Select Your Language

Notifications

webdunia
webdunia
webdunia
Thursday, 3 April 2025
webdunia

ಬಾರ್ ನಲ್ಲಿ ಬಾಟಲಿಯಿಂದ ಹೊಡೆದು ಒಬ್ಬನ ಕೊಲೆ..!

A man was killed by hitting him with a bottle in a bar
bangalore , ಮಂಗಳವಾರ, 11 ಏಪ್ರಿಲ್ 2023 (18:30 IST)
ಆ ಇಬ್ಬರು ಸಿಲಿಕಾನ್ ಸಿಟಿಯ ಭಯಾನಕ ರೌಡಿಶೀಟರ್ ಗಳು, ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡು ಒಡಾಡ್ತಾಯಿದ್ರು,ಒಬ್ಬರನ್ನ ಕಂಡರೆ ಒಬ್ಬರಿಗೆ ಸೇಡು ಆ ಸೇಡು ಇಂದು ಒರ್ವ ರೌಡಿಯನ್ನ ಇಂದು ಮಸಣ ಸೇರಿಸಿದೆ.ಆ ಇಬ್ಬರು ಸಿಲಿಕಾನ್ ಸಿಟಿಯ ಭಯಾನಕ ರೌಡಿಶೀಟರ್ ಗಳು, ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡು ಒಡಾಡ್ತಾಯಿದ್ರು,ಒಬ್ಬರನ್ನ ಕಂಡರೆ ಒಬ್ಬರಿಗೆ ಸೇಡು ಆ ಸೇಡು ಇಂದು ಒರ್ವ ರೌಡಿಯನ್ನ ಇಂದು ಮಸಣ ಸೇರಿಸಿದೆ.

ರಾತ್ರಿ ಇದೇ ಸ್ವಪ್ನಾ ಬಾರ್ ಯೊಂದರಲ್ಲಿ ಇಬ್ಬರು ರೌಡಿಶೀಟರ್ಗಳು ಎಣ್ಣೆ ಹೊಡೆಯಲು ಹೋಗಿದ್ರು, ಒಬ್ಬ ಶಿವರಾಜ್ ಇನ್ನೊಬ್ಬ ಮಂಜುನಾಥ್ ಅಲಿಯಾಸ್ ಪೋಲಾರ್ ಮಂಜ, ಇಬ್ಬರು ಬಾರ್ ನಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ, ಇಬ್ಬರಿಗೂ ಗಲಾಟೆ ಜೋರಾಗಿ ಮಂಜ ಅಲಿಯಾಸ್ ಪೋಲಾರ್ ಮಂಜ ಟೇಬಲ್ ಮೇಲಿದ್ದ ಬಿಯರ್ ಬಾಟಲಿನಿಂದ ರೌಡಿಶೀಟರ್ ಶಿವರಾಜ್ ತಲೆಗೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ನೆಲಕ್ಕೆ ಬಿದ್ದ ಶಿವರಾಜ್ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಪ್ರಾಣ ಹಾರಿಹೋಗಿದೆ. ಹಲ್ಲೆ ಮಾಡಿದ ಮಂಜ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದು, ಆರೊಪಿಗಾಗಿ ಸುಬ್ರಹ್ಮಣ್ಯಪುರಂ ಪೊಲೀಸ್ರು ಬಲೆ ಬೀಸಿದ್ದಾರೆ.

 ಇನ್ನೂ ಶಿವರಾಜ್ ಹಾಗೂ‌ ಮಂಜ ಅಲಿಯಾಸ್ ಪೋಲಾರ್ ಮಂಜ ಇಬ್ಬರು ಪರಿಚಯಸ್ಥರೇ ಇಬ್ಬರಿಗೂ, ಆದ್ರೆ ಶಿವರಾಜ್ ನ ಮೇಲೆ ಮಂಜನಿಗೆ ಹಳೆ‌ದ್ವೇಷವಿತ್ತು ಎಂಬುದು ಸದ್ಯಕ್ಕೆ‌ ಸಿಕ್ಕಿರೋ ಮಾಹಿತಿ, ಶಿವರಾಜ್ ಸಿಕ್ಕಾಗೆಲ್ಲಾ ಹೇ‌ ಮಗಾ ನಿನ್ನ ಬಿಡಲ್ಲಾ ನಿನ್ನ ಒಂದಲ್ಲ ಒಂದು ದಿನ ಮುಗಿಸ್ತೀನಿ ಎಂದು ಹೇಳ್ಕೊಂಡು ಒಡಾಡ್ತಾತ್ತಿದ್ದ, ಅದೇ ರೀತಿ ಒಂಟಿಯಾಗಿ ಸಿಕ್ಕ‌ ಶಿವರಾಜ್‌ನನ್ನ ಇಂದು ಬಿಡಲೇಬಾರದು ಎಂದು ತೀರ್ಮಾನಿಸಿದ, ಅದೇ‌‌ ರೀತಿ ಸ್ಪೈಸಿ ಬಾರ್ ನಲ್ಲಿ‌ ಕಂಠ ಪೂರ್ತಿ ಕುಡಿದು ಶಿವಾರಾಜ್ ಮೇಲೆ ಕಿರಿಕ್ ಮಾಡ್ದ ಅಂದುಕೊಂಡಂತೆ ಮಂಜ ಅಲಿಯಾಸ್ ಪೋಲಾರ್ ಮಂಜ ಶಿವರಾಜನಿಗೆ ಒಂದು ಗತಿ ಕಾಣೀಸೆಬಿಟ್ಟ. ಇನ್ನೂ ಸುಬ್ರಹ್ಮಣ್ಯಪುರಂ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿ ಮಂಜನಿಗಾಗಿ ಬಲೆ ಬೀಸಿದ್ದಾರೆ. ಇನ್ನೂ ರೌಡಿಶೀಟರ್ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು ಶವ ಪರೀಕ್ಷೆ ನಡೆಸುತ್ತಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ