Select Your Language

Notifications

webdunia
webdunia
webdunia
Thursday, 10 April 2025
webdunia

ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

A barbaric killing of a single woman in Bangalore
bangalore , ಮಂಗಳವಾರ, 11 ಏಪ್ರಿಲ್ 2023 (18:20 IST)
ಆಕೆ ಗಂಡನಿಲ್ಲದೆ ಒಂಟಿಯಾಗಿದ್ದಳು.. ದೂರದೂರಿಂದ ಬಂದ ಆಕೆ ಬಾಡಿಗೆ ಮನೆ ಪಡೆದು ವಾಸವಿದ್ದಳು.. ಸಣ್ಣದೊಂದು ಕೆಲಸ ಮಾಡಿಕೊಂಡು ಬದುಕು ಸಾಗಿಸುತಿದ್ದ ಆಕೆ ಇದ್ದಕಿದ್ದ ಹಾಗೆ ನಾಪತ್ತೆಯಾಗಿದ್ದಳು.. ಅಕ್ಕಪಕ್ಕದ ಮನೆಯವರು ಆಕೆಯ ಮನೆಯಿಂದ ಬಂದ ಕೆಟ್ಟವಾಸನೆಗೆ ಇಣುಕಿ ನೋಡಿದಾಗಲೇ ಗೊತ್ತಾಗಿದ್ದ ಆಕೆಯ ಭೀಕರ ಕೊಲೆಯಾಗಿದೆ.

ಈ ಫೋಟೊದಲ್ಲಿರುವ ಈಕೆಯ ಹೆಸರು ಅಂಬಿಕಾ.. ಮೂಲತಃ ಬಳ್ಳಾರಿಯವಳಾದ ಈಕೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದರು ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈಕೆ ಕೆಆರ್ ಪುರಂ ಸಮೀಪದ ಪ್ರಶಾಂತ್ ನಗರದಲ್ಲಿ ತಾನು ವಾಸವಿದ್ದ ಬಾಡಿಗೆ ಮನೆಯಲ್ಲೇ ನಿಗೂಢವಾಗಿ ಸಾವನಪ್ಪಿದ್ದಾಳೆ.. ಜೊತೆಗೆ ಆಕೆ ಸಾವನಪ್ಪಿರೋ ಸಂಗತಿ ಕೊಲೆಯಾದ ನಾಲ್ಕು ದಿನಗಳ ಬಳಿಕ ಬೆಳಕಿಗೆ ಬಂದಿದೆ.

ಅಂಬಿಕಾಗೆ ಈ ಹಿಂದೆ ಎರಡು ಮದುವೆಯಾಗಿತ್ತಂತೆ.. ಮೊದಲನೇ ಗಂಡನ ಜೊತೆ ವಿಚ್ಚೇಧನವಾಗಿ ದೂರಾಗಿದ್ರೆ, ಬಳಿಕ ಎರಡನೇ ಮದುವೆ ಮಾಡಿಕೊಂಡಿದ್ದಳು. ಆತ ಕಳೆದ ಕೆಲ ತಿಂಗಳ ಹಿಂದಷ್ಟೇ ಅನಾರೋಗ್ಯ ಹಿನ್ನಲೆ ಸಾವನಪ್ಪಿದ್ದನೆ.. ಇನ್ನು ಈಕೆಗೆ ೧೫ ವರ್ಷದ ಮಗನಿದ್ದು, ತುಮಕೂರಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದಾನೆ.. ಬದುಕು ಕಟ್ಟಿಕೊಳ್ಳೊ ಕನಸಿನಲ್ಲಿ ಬೆಂಗಳೂರಿಗೆ ಬಂದ ಆಕೆ ನಿಗೂಢ ಸಾವನಪ್ಪಿದ್ದಾಳೆ.ಅಸಲಿಗೆ ಬುದುವಾರ ಕೆಲಸ ಮುಗಿಸಿಕೊಂಡು ಬಂದಿದ್ದ ಆಕೆ ಅಂದು ಏರಿಯಾದವರ ಜೊತೆ ಮಾತನಾಡಿದ್ದಳಂತೆ.. ಬಳಿಕ ಆಕೆ ಯಾರಿಗೂ ಕಾಣಿಸಿಲ್ಲ.. ಇನ್ನು ಮನೆಯಿಂದ ಕೆಟ್ಟವಾಸನೆ ಬರುತಿದ್ದು, ಯಾವುದೋ ನಾಯಿ ಸತ್ತಿರಬೇಕು ಎಂದು ಎಂದುಕೊಂಡಿದ್ದ ಸ್ಥಳೀಯರು.. ಇನ್ನು ಈಕೆ ಬರದ ಹಿನ್ನಲೆ ಹಾಗೂ ವಾಸನೆ ಹೆಚ್ಚಾದ ಕಾರಣ ಮನೆಯ ಬಳಿ ತೆರಳಿದ ಅಕ್ಕಪಕ್ಕದವರಿಗೆ ಅನುಮಾನ ಮೂಡಿದೆ.. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಮಾಹಿತಿ ಹಿನ್ನಲೆ ಮನೆ ತೆರೆದು ನೋಡಿದ ಪೊಲೀಸರಿಗೆ ಕೊಲೆ ಸಂಗತಿ

ಸದ್ಯ ಘಟನೆ ಸಂಭಂದ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಇನ್ನು ಅಂಬಿಕಾಳನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದಾರೆ.. ಕೃತ್ಯ ಓರ್ವನಿಂದಲೇ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಪ್ರಾಥಮಿಕ ಸಾಕ್ಷಿಗಳ ಆಧರಿಸಿ ಆರೋಪಿಗಾಗಿ ಕೆಆರ್ ಪುರಂ ಪೊಲೀಸರು ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆ.ಎಸ್ ಈಶ್ವರಪ್ಪ