Select Your Language

Notifications

webdunia
webdunia
webdunia
webdunia

ಕಳೆದ‌ ಒಂದು ತಿಂಗಳ ಹಿಂದೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

A dead body of a young man was found in a decomposed state a month ago
bangalore , ಮಂಗಳವಾರ, 11 ಏಪ್ರಿಲ್ 2023 (19:09 IST)
ಕಳೆದ‌ ಒಂದು ತಿಂಗಳ ಹಿಂದೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿ ಅನುಮಾನಾಸ್ಪಾದ ಸಾವು‌ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಪೊಲೀಸರು ತನಿಖೆ ಇದೊಂದು ಕೊಲೆಯೆಂದು ಕಂಡುಕೊಂಡಿದ್ದು ಈ ಸಂಬಂಧ ಮೂವರನ್ನು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
 
ಮೃತ ಸೆಫುಲ್ಲಾ ಎಂಬಾತನನ್ನ ಕೊಲೆಮಾಡಿದ ಆರೋಪದಡಿ ಪ್ರಶಾಂತ್, ಜಬಿ ಹಾಗೂ ಶಾಬಾಜ್ ಎಂಬುವರನ್ನು ಬಂಧಿಸಲಾಗಿದೆ. ರಾಮಮೂರ್ತಿನಗರದ ಸಾದಹಳ್ಳಿ ಬಳಿಯ  ಚರಂಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು‌. ಪರಿಶೀಲನೆ ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಮೃತನ ವಿವರ ಹಾಗೂ ಕೃತ್ಯಕ್ಕೆ ಕಾರಣ ಬಗ್ಗೆ ನಿರಂತರ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.‌ ಅಲ್ಲದೆ ಮೃತನ ಗುರುತು ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿತ್ತು.  ಈ ನಡುವೆ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಳು. ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಗ ಸೆಫುಲ್ಲಾ ಈ ಹಿಂದೆ ಕಳ್ಳತನ ಮಾಡಿದ ಬಗ್ಗೆ ಪ್ರಶಾಂತ್ ಹಾಗೂ ಆತನ ಸಹಚರರು ಕೂಡಿಹಾಕಿ ಹಲ್ಲೆ ನಡೆಸಿದ್ದರು ಎಂದು ಸುಳಿವು ನೀಡಿದ್ದರು. ಕೂಡಲೇ ಪ್ರಶಾಂತ್ ನನ್ನ ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ‌. 
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರನ್ನ ಡ್ರಗ್ಸ್ ಮುಕ್ತ ಮಾಡಲು ಪೊಲೀಸ್ರು ಇನ್ನಿಲ್ಲದ ಕಸರತ್ತು