Select Your Language

Notifications

webdunia
webdunia
webdunia
webdunia

ಸವರ್ಣಿಯರು-ದಲಿತರ ನಡುವೆ ಗಲಾಟೆ

ಎರಡು ಗುಂಪು
ಚಿಕ್ಕೋಡಿ , ಸೋಮವಾರ, 3 ಸೆಪ್ಟಂಬರ್ 2018 (19:29 IST)
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಸಲಾಪುರದಲ್ಲಿ  ಗಲಾಟೆ ನಡೆದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಅವಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ನಸಲಾಪುರ ಗ್ರಾಮದಲ್ಲಿ‌ ಸವರ್ಣಿಯರು ಮತ್ತು ದಲಿತರ ಮಧ್ಯ   ಕೈ ಕೈ ಮಿಲಾಯಿಸಿ ಹೊಡೆದಾಟ ನಡೆದಿದೆ. ಪರಿಶಿಷ್ಟ ಜಾತಿಯ ಜನರು ಹಾಗೂ ಸವರ್ಣಿಯರ ನಡುವೆ ತೀವ್ರ  ಗಲಾಟೆಯಾಗಿದೆ. ಗಲಾಟೆಯಲ್ಲಿ ಹಲವಾರು ಜನರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.  ಪೊಲೀಸರು ಶಾಂತಿ ಕಾಪಾಡಲು ಯತ್ನಿಸುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂ ಯಂತ್ರದಲ್ಲಿ ದೋಷ: ಬಿಜೆಪಿ ಅಭ್ಯರ್ಥಿ ಆರೋಪ