Select Your Language

Notifications

webdunia
webdunia
webdunia
webdunia

ಪತ್ನಿಯರ ಹೊಡೆದಾಟ; ಪತಿ ಪರಾರಿ

ಪತ್ನಿಯರ ಹೊಡೆದಾಟ; ಪತಿ ಪರಾರಿ
ದಾವಣಗೆರೆ , ಶುಕ್ರವಾರ, 31 ಆಗಸ್ಟ್ 2018 (19:08 IST)
ಆಗಲೇ ಒಬ್ಬಾಕೆಯನ್ನ ಮದುವೆಯಾಗಿ ಎರಡು ಮಕ್ಕಳನ್ನ ಕರುಣಿಸಿ, ಮೊದಲನೇ ಹೆಂಡತಿಗೆ ಗೊತ್ತಾಗದಂತೆ ಇನ್ನೊಬ್ಬಳನ್ನ ಮದುವೆಯಾಗಿದ್ದಾನೆ. ಇನ್ನು ಎರಡನೇ ಮದುವೆ ವಿಚಾರ ಮೊದಲ ಹೆಂಡತಿಗೆ ಗೊತ್ತಾಗುತ್ತಿದ್ದಂತೆ ಆದ ಅವಾಂತರ ಅಸ್ಟಿಷ್ಟಲ್ಲ. 

ದಾವಣಗೆರೆ ಜಿಲ್ಲೆ ಹರಿಹರ ಸಮೀಪವಿರುವ ಕವಲೆತ್ತು ಗ್ರಾಮದಲ್ಲಿ ಮೊದಲ ಹಾಗೂ ಎರಡನೇ ಪತ್ನಿಯರಿಬ್ಬರು ಮಾರಾಮಾರಿ ಮಾಡಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷದ ಹಿಂದೆ ಹರಪನಹಳ್ಳಿ ತಾಲೂಕಿನ ಪುಣಬಘಟ್ಟ ಗ್ರಾಮದ ಭಾಗ್ಯ ಹಾಗೂ ವಸಂತ್ ಎಂಬುವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವೇಳೆ ಸುಖ ಸಂಸಾರ ನಡೆಸುತ್ತಿದ್ದ ಇಬ್ಬರಿಗೆ ಎರಡು ಮಕ್ಕಳು ಸಹ ಆಗಿವೆ. ಆದ್ರೆ ಕಳೆದ 5 ವರ್ಷದ ಹಿಂದೆ ಮೊದಲ ಹೆಂಡತಿ ಭಾಗ್ಯಳನ್ನ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದ ವಸಂತ್, ನಂತರದಲ್ಲಿ ಭಾಗ್ಯಳನ್ನ ಭೇಟಿಯು ಸಹ ಆಗಿಲ್ಲ. ಈಗ ಕಳೆದ 3 ವರ್ಷದಿಂದ ಪತಿ ವಸಂತ್ ಇನ್ನೊಬ್ಬಾಕೆಯನ್ನ ಮದುವೆಯಾಗಿರುವುದು ಮೊದಲನೇ ಪತ್ನಿಗೆ ಭಾಗ್ಯಗೆ ಗೊತ್ತಾಗಿದೆ.

ವಿಷಯ ಗೊತ್ತಾಗುತ್ತಿದ್ದಂತೆ ಗಂಡನ ವಿಳಾಸ ತಿಳಿದು  ಗಂಡನ ಮನೆಗೆ ನುಗ್ಗಿ ಎರಡನೇ ಹೆಂಡತಿ ರೇಖಾ ಅವರಿಗೆ ಥಳಿಸಿದ್ದಾರೆ. ಇನ್ನು ಪತ್ನಿ ಮನೆಗೆ ಬರುವುದು ಗೊತ್ತಾಗುತ್ತಿದ್ದಂತೆ ಎರಡನೇ ಹೆಂಡತಿ ರೇಖಾ ಅವಳನ್ನ ಮನೆಯಲ್ಲೇ ಬಿಟ್ಟು ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆ ತೆರಿಗೆ ಏರಿಕೆಗೆ ಜನರ ಆಕ್ರೋಶ