Select Your Language

Notifications

webdunia
webdunia
webdunia
webdunia

ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್

h
bangalore , ಶನಿವಾರ, 13 ಆಗಸ್ಟ್ 2022 (14:52 IST)
ಬೆಂಗಳೂರಿನ ಉದ್ಯಮಿಗೆ  ಹನಿ ಟ್ರಾಪ್ ಮಾಡಿದ್ದ ಅರೋಪಿಯನ್ನ ಅರೆಸ್ಟ್ ಮಾಡಲಾಗಿದೆ.ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ  ಬಂಧಿತ ಅರೋಪಿ.ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ  ಅರೋಪಿ ನಾಯಕನಾಗಿದ್ದ.ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ  ಚಾಟ್ ಮಾಡಿದ್ದ. ಅಷ್ಟೇ ಅಲ್ಲದೆ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದಾನೆ. 
 
ಇನ್ನೂ ಉದ್ಯಮಿಗೆ ಇತ್ತೀಚೆಗೆ  ಪರಿಚಯ ಅಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದಾನೆ . ನಂತರ ಉದ್ಯಮಿಯನ್ನ ಭೇಟಿಯಾಗಿ ತಾವು  ಕ್ರೈಮ್ ಪೊಲೀಸರು ಎಂದು ಹೇಳಿ ಹೆದರಿಸಿದ್ದಾನೆ.ಯುವತಿಯರ ಜೊತೆಗೆ ಅಶ್ಲೀಲ ಚಾಟ್ ತೋರಿಸಿ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿದ್ದಾನೆ.ನಂತರ ಕೇಸ್  ಮುಂದುವರೆಸದಿರಲು ಹಣ ಕೇಳಿದ್ದಾನೆ.ಮೊದಲಿಗೆ ಐವತ್ತು ಸಾವಿರ ಕೇಳಿದ್ದಾನೆ. ನಂತರ ಬ್ಯಾಂಕ್ ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದಾನೆ .ಹಂತ ಹಂತ ವಾಗಿ ಒಟ್ಟು ಹದಿನಾಲ್ಕು ಲಕ್ಷ ಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ.ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದಾನೆ.
 
ಉದ್ಯಮಿಗೆ  ಡೌಟ್ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.ದೂರಿನ ಅನ್ವಯ ಅರೋಪಿಯನ್ನ ಬಂಧಿಸಿ ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿ ನಾಯಿಯಲ್ಲಿ ಮಂಕಿಪಾಕ್ಸ್ ಪತ್ತೆ!