Select Your Language

Notifications

webdunia
webdunia
webdunia
webdunia

ಹುಲಿಯುಗುರು ಇಟ್ಟುಕೊಂಡವರ ಬಂಧ ಸರಿಯಲ್ಲ

ಹುಲಿಯುಗುರು ಇಟ್ಟುಕೊಂಡವರ ಬಂಧ ಸರಿಯಲ್ಲ
bangalore , ಶುಕ್ರವಾರ, 27 ಅಕ್ಟೋಬರ್ 2023 (19:20 IST)
ಹುಲಿ ಉಗುರಿನ ಪೆಂಡೆಂಟ್, ಡಾಲರ್ ಮತ್ತು ಲಾಕೆಟ್ ಧರಿಸಿದವರನ್ನು ಅಥವಾ ಮನೆಯಲ್ಲಿಟ್ಟುಕೊಂಡವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜೈಲಿಗೆ ಕಳಿಸುತ್ತಿರುವ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಲ್ಲುತ್ತಿರುವ ಪೋಟೋಗಳನ್ನು ಅನೇಕ ಜನ ತಮ್ಮ ಮನೆಗಳಲ್ಲಿ ತೂಗು ಹಾಕಿದ್ದಾರೆ. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಲ್ಲವೇ? ಅದನ್ನು ನೋಡಿ ಬೇರೆ ಜನ ಹುಲಿಗಳನ್ನು ಬೇಟೆಯಾಡಲು ಮುಂದಾದರೆ ಹೇಗೆ? ಎಂದು ಪ್ರಶ್ನಿಸಿದ್ರು. ಕೆಲವರು ತಮಗೆ ತಿಳಿಯದೆ ಅಥವಾ ಪರಂಪರಾಗತವಾಗಿ ಹುಲಿಯುಗುರು ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ.
 
ಅವರನ್ನೆಲ್ಲ ಬಂಧಿಸಿ ಜೈಲಿಗೆ ಹಾಕುತ್ತಾ ಹೋದರೆ, ನಾಡಿನ ಜೈಲುಗಳು ಸಾಕಾಗಲ್ಲ.ಅರಣ್ಯ ಇಲಾಖೆ ಹುಲಿಯುಗುರು ಇಟ್ಟುಕೊಂಡಿರುವವರನ್ನು ಬಂಧಿಸುತ್ತಿರೋದು ಸರಿಯಲ್ಲ. ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಸಚಿವ ಮತ್ತು ಅಧಿಕಾರಿಗಳು ವಿಷಯದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿದೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ