ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆಯಡಿ ಸಹಿಸಂಗ್ರಹ ಆರಂಭಿಸಿದ ಬಿಜೆಪಿ

Sampriya
ಭಾನುವಾರ, 2 ನವೆಂಬರ್ 2025 (13:00 IST)
Photo Credit X
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಟನಲ್ ಯೋಜನೆ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ಈ ಸಂಬಂಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ವಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆ ಅಡಿಯಲ್ಲಿ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ.

ಲಾಲ್‌ಬಾಗ್ ಗುಡ್ಡದ ಮೇಲೆ ಜನರ ಜೊತೆ ಬಿಜೆಪಿ ನಾಯಕರು ಕುಳಿತ ಅಭಿಯಾನ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್ ಟನಲ್ ರೋಡ್ ಮಾರ್ಗದ ಬಗ್ಗೆ ಜಂಟಿ ನಿರ್ದೇಶಕ ಜಗದೀಶ್ ಬಳಿ ಮಾಹಿತಿ ಕೇಳಿ ಪಡೆದಿದ್ದಾರೆ. ಅಲ್ಲದೇ ಜಿಬಿಎಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಜೊತೆ ಚರ್ಚೆ ನಡೆಸಿದರು.

ಬೆಂಗಳೂರಿನ ಪರಿಸರ ಪ್ರೇಮಿಗಳ, ಇತಿಹಾಸ ಇರುವ, ಬೆಂಗಳೂರಿನ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು ಸೇರಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವ ಹಾಗಾಗಿದೆ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಈ ಸುರಂಗ ರಸ್ತೆಯು ವಿಐಪಿ ಕಾರಿಡಾರ್ ಆಗುತ್ತದೆ. ಶೇ 90 ಜನ ಮಧ್ಯಮ ವರ್ಗದವರು ಹಾಗೂ ಬಡವರು, ಬೈಕ್, ಸೈಕಲ್‌ಗೆ ಎಂಟ್ರಿ ಇಲ್ಲ. ಕೇವಲ ಕಾರಿಗೆ ಮಾತ್ರ ಎಂಟ್ರಿ, ಅದಕ್ಕೆ ಇದು ವಿಐಪಿ ರೋಡ್. ₹ 8 ಸಾವಿರ ಕೋಟಿಗೆ ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪೇಮೆಂಟ್ ಕೊಡಬೇಕು. ಈಗ ಸಾಲ ಮಾಡಲು ಹೊರಟಿದ್ದಾರೆ  ಎಂದು ವಾಗ್ದಾಳಿ ನಡೆಸಿದರು. 

ಟನಲ್ ರೋಡ್‌ಗೂ ಮೊದಲು ಇರೋ ಗುಂಡಿಗಳನ್ನ ಮುಚ್ಚಿ. ಕಣ್ಣಿಗೆ ಕಾಣುವ ರಸ್ತೆ ಬಿಟ್ಟು, ಕಾಣದ ಟನಲ್ ರೋಡ್ ಮಾಡಲು ಹೊರಟ್ಟಿದ್ದೀರಾ? ಸಿಎಂ ಹೇಳಿದ ಮೇಲೆ ಗುಂಡಿ ಮುಚ್ಚುತ್ತಾರೆ ಅಂತ ಜನ ಅಂದುಕೊಂಡಿದ್ದರು. ಆದರೆ ಸಿಎಂ ಮಾತಿಗೆ ಕಾರ್ಪೋರೇಷನ್ ಅವರು ಬೆಲೆ ಕೊಟ್ಟಿಲ್ಲ ಎಂದು ಟೀಕಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments