ಬಿಜೆಪಿಯಿಂದ ಸರ್ವಾಧಿಕಾರಿ ಆಡಳಿತ ಎಂದ ಖರ್ಗೆ

ಶುಕ್ರವಾರ, 9 ನವೆಂಬರ್ 2018 (19:22 IST)
ಕೇಂದ್ರದಲ್ಲಿ ಬಿಜೆಪಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪ ಮುಂದುವರಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಗೆ ಬಡಜನರು, ಜನಸಾಮಾನ್ಯರು ಬೇಸತ್ತಿದ್ದಾರೆ.

ಕೇಂದ್ರದಲ್ಲಿರುವ ಸರ್ಕಾರ ಬದಲಾವಣೆಗಾಗಿ ಜನತೆ ಕಾಯುತ್ತಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿಯೇತರ ಮಹಾಮೈತ್ರಿ ವಿವಿಧ ಪಕ್ಷಗಳು ಒಂದಾಗಿವೆ. ಮಹಾಮೈತ್ರಿಗೆ  ದೇಶದೆಲ್ಲೆಡೆ  ಜನರು  ವ್ಯಾಪಕ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿಪ್ಪು ಜಯಂತಿ: ಸಿಎಂ ಪಾಲ್ಗೊಳ್ಳುವುದು ಅನುಮಾನ