Select Your Language

Notifications

webdunia
webdunia
webdunia
webdunia

ದನದ ಕೊಟ್ಟಿಗೆ ಕುಸಿದು ವೃದ್ಧ ಸಾವು, ಮೊಮ್ಮಗ ಪಾರು

chikamangaluru
chikamangaluru , ಶುಕ್ರವಾರ, 23 ಜುಲೈ 2021 (14:45 IST)
ಸತತ ಮಳೆಯಿಂದಾಗಿ ದನದ ಕೊಟ್ಟಿಗೆ ಕುಸಿದ ಪರಿಣಾಮ ವೃದ್ಧ ಮೃತಪಟ್ಟು ಮೊಮ್ಮಗ ಪಾರಾದ ಘಟನೆ ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಬಸವೇಗೌಡ (65) ಮೃತ ದುರ್ದೈವಿ. ಅಜ್ಜನ ಜೊತೆಗಿದ್ದ ಮೊಮ್ಮಗ ರಮೇಶ್  ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದನಗಳಿಗೆ ಮೇವು ಹಾಕಲು ಹೋಗಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದಿದ್ದು, ಗೋಡೆಗಳ ಅಡಿ ಸಿಲುಕಿಕೊಂಡ ಬಸವೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಕೊಟ್ಟಿಗೆಯಲ್ಲಿದ್ದ ಹಸು ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಶವವನ್ನು ಹೊರಗೆ ತೆಗೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

100ಕ್ಕೂ ಹೆಚ್ಚು ನೀಲಿ ಚಿತ್ರ ನಿರ್ಮಿಸಿದ್ದ ರಾಜ್ ಕುಂದ್ರಾ?