Select Your Language

Notifications

webdunia
webdunia
webdunia
webdunia

ಪ್ರವಾಸಕ್ಕೆ ಬಂದಿದ್ದ 6 ಯುವಕರು ಶಿರ್ಲೆ ಜಲಪಾತದಲ್ಲಿ ನಾಪತ್ತೆ

ಪ್ರವಾಸಕ್ಕೆ ಬಂದಿದ್ದ 6 ಯುವಕರು ಶಿರ್ಲೆ ಜಲಪಾತದಲ್ಲಿ ನಾಪತ್ತೆ
yalapura , ಶುಕ್ರವಾರ, 23 ಜುಲೈ 2021 (14:25 IST)
ಪ್ರವಾಸಕ್ಕೆ ಬಂದಿದ್ದ 6 ಯುವಕರು ಯಲ್ಲಾಪುರ ಬಳಿಯ ಶಿರ್ಲೆ ಜಲಪಾತದ ಬಳಿ ಈಜಲು ಹೋಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ನವನಗರದಿಂದ ಪ್ರವಾಸಕ್ಕೆ ಬಂದಿದ್ದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ್  ಸೈಯ್ಯದ ಶೇಖ್, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ  ನಾಪತ್ತೆಯಾಗಿದ್ದಾರೆ.
ಹುಬ್ಬಳ್ಳಿಯ ನವನಗರದಿಂದ ಪ್ರವಾಸ ಸ್ಥಳ ನೋಡಲು ಹೋಗಿದ್ದ 6 ಮಂದಿ ಯುವಕರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯಿರುವ ಪಾಲ್ಸ್ ಗೆ ಬಂದಿದ್ದರು.
ಗುರುವಾರದಿಂದಲೇ ಯುವಕರು ನಾಪತ್ತೆಯಾಗಿದ್ದು, ಯಲ್ಲಾಪುರ ಠಾಣೆಯ ಪೊಲೀಸರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹುಡುಕಾಟ ನಡೆದಿದೆ.
ನಿನ್ನೆ ದಿನ ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿಯಲ್ಲಿ ಇವರ ಮೂರು ಸ್ಕೂಟಿಗಳು ಪತ್ತೆಯಾಗಿದ್ದು, ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಯಲ್ಲಾಪುರ ಠಾಣೆಯ ಇನ್ಸ್ ಪೆಕ್ಟರ್ ಸುರೇಶ ಯಳ್ಳೂರು ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿದೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ