Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆ ನವೆಂಬರ್ 8 ರಂದು ಕೈಗೆತ್ತಿಗೊಳ್ಳಲಿರುವ ಪಾಲಿಕೆ

ಬಿಬಿಎಂಪಿ ಚುನಾವಣೆ ನವೆಂಬರ್ 8 ರಂದು ಕೈಗೆತ್ತಿಗೊಳ್ಳಲಿರುವ ಪಾಲಿಕೆ
bangalore , ಭಾನುವಾರ, 7 ನವೆಂಬರ್ 2021 (19:53 IST)
ಬೆಂಗಳೂರು: ಸುಪ್ರೀಂಕೋರ್ಟ್ ಬಿಬಿಎಂಪಿ ಚುನಾವಣೆ ವಿಷಯವನ್ನು ಇದೇ ನ. 8ರಂದು ಕೈಗೆತ್ತಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರುವ ಜ. 13ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುತ್ತಿದ್ದು, ನ.8ರಂದು ಕರಡು ಮತಪಟ್ಟಿ ಪ್ರಕಟಗೊಳ್ಳಲಿದೆ. ಆದ್ದರಿಂದ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪಾಲಿಕೆ ವಿಶೇಷ ಆಯುಕ್ತ ಕೆ.ಎ.ದಯಾನಂದ್ ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು ದಾಖಲಿಸಲು ಅಥವಾ ಬದಲಾಯಿಸಲು ಮತ್ತು ಅದೇ ಕ್ಷೇತ್ರದ ಮತ್ತೊಂದು ವಾರ್ಡ್‌ ಗೆ ಹೆಸರು ನೋಂದಾಯಿಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು. 
ಮತದಾರರು ಪರಿಷ್ಕರಣೆ ಕಾರ್ಯದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು ಮತ್ತು  NVSP  ಪೋರ್ಟಲ್  (www.nsvp.in), (www.voterportal.eci.gov.in)  ಮತ್ತು 1950 ವೋಟರ್ ಹೆಲ್ಪ್ ಲೈನ್ ಮುಖಾಂತರ ನೋಂದಾಯಿಸಬಹುದು ಎಂದು ಹೇಳಿದರು.
ಮೊಬೈಲ್ ಆ್ಯಪ್ ಮೂಲಕ ಹೆಸರು ನೋಂದಣಿ: ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮುಖಾಂತರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
 
ನಗರ ಯೋಜನೆ ಶುಲ್ಕ ಪ್ರಾರಂಭ: ಬಿಬಿಎಂಪಿಗೆ ನಗರ ಯೋಜನೆ ಶುಲ್ಕ ವಿಚಾರ ಕೋರ್ಟ್ ಆದೇಶದಿಂದ ಗೊಂದಲ ಉಂಟಾಗಿರುವುದರಿಂದ ನಗರ ಪಾಲಿಕೆ ತೀವ್ರ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂದೋದಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಬಿಎಂಪಿ ಕಡತವನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಸಮಾರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಶುಲ್ಕ ಪಡೆಯಲು ಪ್ರಾರಂಭಿಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.
 
ರಸ್ತೆ, ಚರಂಡಿ ದುರಸ್ಥಿ: ಮುಖ್ಯಮಂತ್ರಿಗಳ ನಿರ್ದೇಶನದಂತೆ ರಸ್ತೆ ಮತ್ತು ಚರಂಡಿಗಳನ್ನು ದುರಸ್ಥಿ ಮಾಡುವ ಕಾರ್ಯ ಸಮಾರೋಪಾದಿಯಲ್ಲಿ ನಡೆಸಲಾಗುತ್ತಿದೆ. ವಾರ್ಡ್ ಮಟ್ಟದಲ್ಲೂ ಸಹ ಸಮಸ್ಯೆಗಳ ಚರ್ಚೆ ಆಗುತ್ತಿದೆ. ಪ್ರತಿ ವರ್ಷ 70 ರಿಂದ 80 ಕಿಲೋ ಮಿಟರ್ ಹೊಸದಾಗಿ ನಿರ್ಮಾಣ ಮಾಡುತ್ತಾ ಇದ್ದೇವೆ. ನಗರದ ಮಧ್ಯ ಭಾಗದಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ರಾಜಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು ಗೌರವ್ ಗುಪ್ತ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ನಗರ ರಾಜಕಾಲುವೆ ಬಳಿ ಯುವಕನ ಶವ ಪತ್ತೆ