Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಕಸ ವಿಲೇವಾರಿ ಗಾಡಿಗಳಿಗೆ ಚಾಲನೆ

ಬಿಬಿಎಂಪಿ ಕಸ ವಿಲೇವಾರಿ ಗಾಡಿಗಳಿಗೆ ಚಾಲನೆ
ಬೆಂಗಳೂರು , ಶನಿವಾರ, 6 ನವೆಂಬರ್ 2021 (13:21 IST)
ಕಸ ಸಂಗ್ರಹಣೆ ವಾಹನಗಳಿಗೆ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ಲಕ್ಷ್ಮೀಪುರ ಹಾಗೂ ಕಾನ್ ಶೀರಾಮ್ ನಗರ ಭಾಗಕ್ಕೆ ಬಿಬಿಎಂಪಿ ಕಸ ಸಂಗ್ರಹಣೆ 5 ವಾಹನಗಳಿಗೆ ಚಾಲನೆ ನೀಡಿದರು.ನಮ್ಮ ಕ್ಷೇತ್ರವು ಕಸಮುಕ್ತವಾಗಬೇಕು ಈ ನಿಟ್ಟಿನಲ್ಲಿ ಕಸದ ಸಂಗ್ರಹಣೆಯ ವಾಹನಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಕಸವನ್ನು ಯಾರು ಕೂಡ ಹೊರಗಡೆ ಹಾಕಬೇಡಿ , ಜನರು ಕಸ ಸಂಗ್ರಹಣೆಯ ವಾಹನಗಳಿಗೆ ಕಸ ಹಾಕಿ ಸ್ವಚ್ಛತೆ ಕಾಪಾಡಿ, ಸ್ವಚ್ಛತೆ ನಮ್ಮೆಲ್ಲದರ ಜವಾಬ್ದಾರಿ ಎಂದು ಶಾಸಕ ಆರ್. ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತಾಡಲು ಬಿಡದ್ದಕ್ಕೆ ಪ್ರೇಯಸಿ ತಂದೆಗೆ ಚಾಕುವಿನಿಂದ ಇರಿದ ಯುವಕ