Select Your Language

Notifications

webdunia
webdunia
webdunia
webdunia

ವೈದ್ಯರ ಮುಷ್ಕರದ ಹಿನ್ನಲೆ; ರೋಗಿಗಳ ಹಿತಕ್ಕಾಗಿ ಪೊಲೀಸರಿಗೆ ಶರಣಾಗಲು ಮುಂದಾದ ಕರವೇ ಕಾರ್ಯಕರ್ತರು

ವೈದ್ಯರ ಮುಷ್ಕರದ ಹಿನ್ನಲೆ; ರೋಗಿಗಳ ಹಿತಕ್ಕಾಗಿ ಪೊಲೀಸರಿಗೆ ಶರಣಾಗಲು ಮುಂದಾದ ಕರವೇ ಕಾರ್ಯಕರ್ತರು
ಬೆಂಗಳೂರು , ಶುಕ್ರವಾರ, 8 ನವೆಂಬರ್ 2019 (10:31 IST)
ಬೆಂಗಳೂರು : ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಂದು ಸರ್ಕಾರಿ ಹಾಗೂ ಖಾಸಗಿ ಓಪಿಡಿ ಬಂದ್ ಮಾಡಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ರೋಗಿಗಳ ಹಿತಕ್ಕಾಗಿ ಕರವೇ ಕಾರ್ಯಕರ್ತರು ಶರಣಾಗಲು ನಿರ್ಧರಿಸಿದ್ದಾರೆ.




ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ ವಿಚಾರಕ್ಕೆ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಸರ್ಕಾರಿ ಹಾಗೂ ಖಾಸಗಿ ಓಪಿಡಿ ಬಂದ್ ಮಾಡಿ ವೈದ್ಯರು ಹೋರಾಟ ಮುಂದುವರಿಸಿದ್ದಾರೆ. ಇದರಿಂದ ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆ.


ಈ ಹಿನ್ನಲೆಯಲ್ಲಿ ಅಶ್ವಿನಿಗೌಡ ಸೇರಿದಂತೆ ಸುಮಾರು 25 ಜನ ಕರವೇ ಕಾರ್ಯಕರ್ತರು ಜನರ ಹಿತಕ್ಕಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಹೇಳಿದ್ದಾರೆ. ಅಲ್ಲದೇ ವೈದ್ಯರ ಮುಷ್ಕರಕ್ಕೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನ ಕಿವಿಯೊಳಗೆ ಇರುವುದನ್ನು ಕಂಡು ದಂಗಾದ ವೈದ್ಯರು