Select Your Language

Notifications

webdunia
webdunia
webdunia
webdunia

ಹೃದಯರೋಗದಿಂದ ದೂರವಿರಲು ಇವುಗಳನ್ನು ಸೇವಿಸಿ

ಹೃದಯರೋಗದಿಂದ ದೂರವಿರಲು ಇವುಗಳನ್ನು ಸೇವಿಸಿ
ಬೆಂಗಳೂರು , ಶುಕ್ರವಾರ, 8 ನವೆಂಬರ್ 2019 (09:39 IST)
ಬೆಂಗಳೂರು : ಅತಿಯಾದ ಕೊಬ್ಬಿನ ಅಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನವರು ಹೃದಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಲ್ಲದೇ ಒತ್ತಡ, ಚಿಂತೆ, ಸುತ್ತಮುತ್ತಲಿನ ಪರಿಸರ ಹೀಗೆ ಹಲವು ಕಾರಣಗಳಿಂದ ಹೃದಯದ ಸಮಸ್ಯೆ ಎದುರಾಗುತ್ತದೆ. ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.



ಮೆಂತ್ಯ ಕಾಳು ಹಾಗೂ ಮೆಂತ್ಯಸೊಪ್ಪನ್ನು ಸೇವಿಸುವುದರಿಂದ ಇದು ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಮಾಡಿ, ರಕ್ತ ಹೆಪ್ಪುಗಟ್ಟದಂತೆ ತಡೆಗಟ್ಟುತ್ತದೆ. ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದಲ್ಲಿರುವ ಲಿಪಿಡ್ಸ್ ಕಡಿಮೆಯಾಗಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಹಾಗೇ ವಿಟಮಿನ್ ಇ ಹೆಚ್ಚಾಗಿರುವ ಹಸಿರು ತರಕಾರಿಗಳನ್ನು ಸೇವಿಸಿದರೆ ಹೃದಯದ ಆರೋಗ್ಯ ಸ್ಥಿರವಾಗಿರುತ್ತದೆ.


ಸೇಬು, ಸ್ಟ್ರಾಬೆರಿ, ಮೋಸಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯರೋಗದಿಂದ ದೂರವಿರಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಉಗುರುಗಳನ್ನು ಉದ್ದವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ