Publish Date: Sat, 15 Jan 2022 (20:22 IST)
Updated Date: Sat, 15 Jan 2022 (20:29 IST)
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಯಸ್ವಾಮಿ ನಿಧನ ಹಿನ್ನೆಲೆ, ಅವರು ವಾಸವಿದ್ದ ಮನೆಯನ್ನು ಖಾಲಿ ಮಾಡುವಂತೆ ಪ್ರಾಧಿಕಾರ ನೋಟಿಸ್ ಜಾರಿಗೂಳಿಸಿತ್ತು. ನಮಗೆ ವಾಸಕ್ಕೆ ಮನೆ ಇಲ್ಲ ಎಂದು ಮೃತ ಜಯಸ್ವಾಮಿ ಕುಟುಂಬ ಮನೆ ಖಾಲಿ ಮಾಡಲು ಹಿಂದೇಟು ಹಾಕಿ ತಮ್ಮ ಅಳಲು ತೂಡಿಕೂಂಡಿದ್ದಾರೆ. ಆದರೇ ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಮನೆಯ ಪಿಠೋಪಕರಣಗಳನ್ನು ರಸ್ತೆಗೆ ಎಸೆದಿದ್ದಾರೆ. ನಡುರಾತ್ರಿ ಬೀದಿಗೆ ಬಿದ್ದ ಕುಟುಂಬ ನಮಗೆ ವಾಸ ಮಾಡಲು ಮನೆ ಇಲ್ಲ. ನಾವ್ ಎಲ್ಲಿಗೆ ಹೋಗೋಣ ಎಂದು ಗೋಳಾಡಿದ್ದಾರೆ.