Publish Date: Thu, 23 Dec 2021 (20:02 IST)
Updated Date: Thu, 23 Dec 2021 (20:07 IST)
ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿದ ಮೈಸೂರು ನಗರ ಸಿ.ಸಿ.ಬಿ. ಪೊಲೀಸರು, ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬಳನನ್ನು ಬಂಧಿಸಿ, ಇಬ್ಬರು ಮಹಿಳೆಯ ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇಲೆ ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಗಾಯಿತ್ರಿಪುರಂ 2ನೇ ಹಂತ, ಚರ್ಚ್ ಹತ್ತಿರ ಇರುವ ಭೈರವೇಶ್ವರ ನಿಲಯ ಮನೆ ನಂ: 18ರ ಮೇಲೆ ದಾಳಿ ಮಾಡಿದ ಪೊಲೀಸರು, ಈ ಮನೆಯಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಒಬ್ಬ ಮಹಿಳೆಯನ್ನು ಬಂಧಿಸಿದ್ದು, ವೇಶ್ಯಾವಾಟಿಕೆಯಿಂದ ಸಂಪಾದನೆ ಮಾಡಿದ್ದ, 2,474ರೂಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಸಂಬoಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.