Select Your Language

Notifications

webdunia
webdunia
webdunia
webdunia

ಐಕಾನ್ ವಿನ್ನರ್ಸ್ ಆಗಿ ಹೊರ ಹೊಮ್ಮಿದ ಕಿಂಗ್ಸ್ ಆಫ್ ಕೂರ್ಗ್

ಐಕಾನ್ ವಿನ್ನರ್ಸ್ ಆಗಿ ಹೊರ ಹೊಮ್ಮಿದ ಕಿಂಗ್ಸ್ ಆಫ್ ಕೂರ್ಗ್
bangalore , ಗುರುವಾರ, 23 ಡಿಸೆಂಬರ್ 2021 (19:31 IST)
ಸೋಮವಾರಪೇಟೆಯ ಅಡ್ವೆಂಚರ್ ಡ್ಯಾನ್ಸ್ ಕಂಪೆನಿ ವತಿಯಿಂದ ಅಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ವಿನ್ನರ್ಸ್ ಆಗಿ ಹೊರ ಹೊಮ್ಮಿದೆ.
ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಾಡಿಗೆ ಯಕ್ಷಗಾನ, ಕೊಡವ ನೃತ್ಯ, ಕೋಲಾಟ, ಕಂಸಾಳೆ, ವೀರಗಾಸೆ, ಭರತನಾಟ್ಯ, ಡೊಳ್ಳು ಕುಣಿತವನ್ನು ಒಂದೇ ನೃತ್ಯ ಪ್ರಾಕಾರದಲ್ಲಿ ಪ್ರದರ್ಶಿಸಲಾಯಿತು. ಸಂಸ್ಥೆಯ ತರಬೇತುದಾರ ಮಹೇಶ್ ಮಾರ್ಗದರ್ಶನದಲ್ಲಿ ಜೂನಿಯರ್ ತಂಡದ ದಿಲನ್ ಆರ್., ಕುಡೆಕಲ್ ನಿಹಾಲ್, ಪೋಷಿತಾ, ತುಷಾರ, ಡಯಾನ, ಜೀವಿತ, ಅಭಿ, ಮೋಕ್ಷ ವಿ.ಎಲ್., ದಿಲನ್ ಹೆಚ್.ಆರ್., ಪ್ರಜ್ವಲ್ ಕ್ರಾಸ್ತಾ, ದಿಯಾ ದರ್ಶಿನಿ, ಗ್ರೀಷ್ಮ, ಅನುಕ್ತ, ಶಶಾಂಕ್, ವರ್ಣವಿ ನೃತ್ಯ ಪ್ರದರ್ಶನ ಮಾಡಿದರು.
ಸ್ಪರ್ಧೆಯನ್ನು ಮೈಸೂರಿನ ಸಾಯಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಸಹನಾ ಉದ್ಘಾಟಿಸಿದರು. ಅತಿಥಿಗಳಾಗಿ ಮಡಿಕೇರಿಯ ಗುರುಕುಲ ಕಲಾ ಮಂಡಳಿಯ ಸ್ಥಾಪಕ ಪಿ.ಎನ್.ದಿನೇಶ್, ಸುಳ್ಯದ ಡಿ ಯುನೈಟೆಡ್‌ನ ನೃತ್ಯ ಸಂಯೋಜಕ ಅಭಿ ಕುಲಾಲ್, ಸಹಾಯಕ ನೃತ್ಯ ಸಂಯೋಜಕಿ ಆರ್.ವಿ.ಭೂಮಿಕಾ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಪ.ಪಂ. ಅಧ್ಯಕ್ಷ ಪಿ.ಕೆ.ಚಂದ್ರು, ಸದಸ್ಯ ಎಂ.ವಿ.ಜೀವನ್, ಹಿಂ.ಜಾ.ವೇ. ಜಿಲ್ಲಾ ಉಪಾಧ್ಯಕ್ಷ ಸುಭಾಶ್, ಮಾಜಿ ಸೈನಿಕ ಎನ್. ವಿ.ಚಂದ್ರಶೇಖರ್, ಪೊಲೀಸ್ ನಿರೀಕ್ಷಕ ಬಿ.ಜೆ.ಮಹೇಶ್, ವಕೀಲ ಬಿ.ಜೆ ದೀಪಕ್, ಮೇಘನಾ ಡ್ರೆöÊವಿಂಗ್ ಸ್ಕೂಲ್‌ನ ಮಂಜುನಾಥ್ ಇನ್ನಿತರರು ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಅಕ್ರಮ ಸಕ್ರಮ ಗ್ರೀನ್ ಸಿಗ್ನಲ್