Select Your Language

Notifications

webdunia
webdunia
webdunia
Saturday, 12 April 2025
webdunia

ರಾಜ್ಯದಲ್ಲಿ ಒಮೈಕ್ರೋನ್ ಹಾವಳಿ

Corona
ಬೆಂಗಳೂರು , ಗುರುವಾರ, 23 ಡಿಸೆಂಬರ್ 2021 (16:58 IST)
ಒಮಿಕ್ರಾನ್ ವೈರಸ್ ನ ಭೀತಿ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಇಂದು ಒಂದೇ ದಿನ 12 ಜನಕ್ಕೆ ಒಮಿಕ್ರಾನ್ ಸೋಂಕು ತಗುಲಿದೆ.
31ಕ್ಕೆ ಏರಿಕೆಯಾಗಿದೆ.
 
ಇಂಗ್ಲೆಂಡ್, ನಯಾಗರ, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್‌ ಸೇರಿದಂತೆ ಹಲವು ಕಡೆಯಿಂದ ಬೆಂಗಳೂರಿಗೆ ಬಂದವರಲ್ಲಿ ಒಮಿಕ್ರಾನ್ ಕಂಡು ಬಂದಿದೆ‌. ಇಂದು ಒಂದೇ ದಿನ ಕಂಡು ಬಂದ 12 ಸೋಂಕಿತರಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಸೋಂಕಿತರಿದ್ದಾರೆ. ಬೆಂಗಳೂರು ಒಂದರಲ್ಲೇ 10, ಮಂಗಳೂರು ಹಾಗೂ ಮೈಸೂರಿನಲ್ಲಿ ತಲಾ ಒಂದೊಂದು ಕೇಸ್ ಪತ್ತೆಯಾಗಿದೆ.
 
ಈ ಸಂಬಂಧ ಸಚಿವ ಸುಧಾಕರ್ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಗೆ ಒಮಿಕ್ರಾನ್ ಕಂಡು ಬಂದಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಒಮಿಕ್ರಾನ್ ಕಾಟದಿಂದ ಜನ ಆತಂಕಕ್ಕೆ ಒಳಗಾಗುವ ಬದಲು ಮುಂಜಾಗ್ರತ ಕ್ರಮ ತೆಗೆದುಕೊಂಡು ಸುರಕಗಷಿತವಾಗಿರುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಸ್ಕಾಂನಿಂದ ಆಪ್ ಬಿಡುಗಡೆ