Select Your Language

Notifications

webdunia
webdunia
webdunia
webdunia

ಮೈಸೂರು ರಾಜಮನೆತನಕ್ಕೆ ಹೊಸ ಕಂದಮ್ಮನ ಆಗಮನ

ಮೈಸೂರು ರಾಜಮನೆತನಕ್ಕೆ ಹೊಸ ಕಂದಮ್ಮನ ಆಗಮನ
ಮೈಸೂರು , ಗುರುವಾರ, 7 ಡಿಸೆಂಬರ್ 2017 (05:55 IST)
ಮೈಸೂರು: ಐವತ್ತೈದು ವರ್ಷಗಳ ನಂತರ ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ.ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ aವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ನಿನ್ನೇ ರಾತ್ರಿ 9.50 ಕ್ಕೆ  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.


ನಿನ್ನೆ ಬೆಳಿಗ್ಗೆ ತ್ರಿಷಿಕಾ ಕುಮಾರಿ ಒಡೆಯರ್ ಆಸ್ಪತ್ರೆಗೆ ದಾಖಲಾಗಿದ್ದು, ರಾತ್ರಿ ಸರಿಸುಮಾರು 9.50 ಕ್ಕೆ ಹೆರಿಗೆಯಾಗಿದೆ.  ಪುತ್ರನ ಆಗಮನದಿಂದ ಮೈಸೂರು ರಾಜಮನೆತನದಲ್ಲಿ ಸಂತಸ ಮನೆ ಮಾಡಿದೆ. ರಾಜಮಾತೆ ಪ್ರಮೋದದೇವಿಯವರು ಹೆರಿಗೆಯ ಸಮಯದಲ್ಲಿ ಸೊಸೆಯ ಜೊತೆಗಿದ್ದರು. ಪುತ್ರನನ್ನು ಮುದ್ದಿಸಿ ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಖುಷಿಪಟ್ಟರು.


ಐವತ್ತೈದು ವರ್ಷಗಳ ನಂತರ ಮೈಸೂರು ಯದುವಂಶದ ಅರಮನೆಗೆ ಕಂದಮ್ಮನ ಆಗಮನವಾಗಿದೆ. 1962ರಲ್ಲಿ ರಾಣಿ ವಿಶಾಲಾಕ್ಷೀದೇವಿಯವರ ಜನನವಾಗಿತ್ತು. ಇವರು ಜಯಚಾಮರಾಜ ಒಡೆಯರ್ ಹಾಗು ಅಮ್ಮಣ್ಣಿಗೆ ಜನಿಸಿದ ಕೊನೆಯ ಮಗುವಾಗಿದ್ದರು. ಆ ನಂತರ ಯದುವಂಶದಲ್ಲಿ ಯಾವುದೆ ಮಗು ಜನಿಸಿರಲಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀಲಿ ಕಣ್ಣಿನ ಸುಂದರ ಬಾಲಕಿಗೆ 5 ಲಕ್ಷ ಫಾಲೋವರ್ಸ್ ನಂಬುತ್ತೀರಾ...