Publish Date: Fri, 24 Nov 2017 (11:21 IST)
Updated Date: Fri, 24 Nov 2017 (11:26 IST)
ಹಾಸನ: ತಾಯಿ ಮಗುವಿನ ಸಂಬಂಧ ಯಾರೂ ಕೂಡ ದೂರಮಾಡಲಾಗದ ಅನುಬಂಧ. ತನ್ನ ಮಗುವಿಗಾಗಿ ತಾಯಿಯೊಬ್ಬಳು ತನ್ನ ಜೀವವನ್ನೇ ತ್ಯಾಗ ಮಾಡಿದ ಎಷ್ಟೋ ಘಟನೆಗಳನ್ನು ನಾವು ಕೇಳಿರುತ್ತವೆ. ಆದರೆ ಇಲ್ಲೊಬ್ಬಳು ತಾಯಿ ಪತಿಯ ಚಿಕಿತ್ಸೆಗಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾಳೆ.
ಅನಾರೋಗ್ಯದಿಂದ ಬಳಲುತ್ತಿರುವ ಪತಿಯ ಚಿಕಿತ್ಸೆಗಾಗಿ ಜ್ಯೋತಿ ಎಂಬಾಕೆ ತನ್ನ ಮೂರು ತಿಂಗಳ ಗಂಡು ಮಗುವನ್ನು 22 ಸಾವಿರ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಬೇಲೂರಿನ ನಿವಾಸಿಯಾಗಿದ್ದ ನಿವೃತ್ತ ನರ್ಸ್ ಶಾಂತಮ್ಮ ಅವರಿಗೆ ಮಗುವನ್ನು ಮಾರಾಟ ಮಾಡಿದ್ದಾಳೆ.
ವಿಷಯ ತಿಳಿದ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಅವರು ಸ್ಥಳಕ್ಕೆ ಧಾವಿಸಿ ಮಗುವನ್ನು ಕೊಡಲು ಕೇಳಿದಾಗ ಶಾಂತಮ್ಮ ನಿರಾಕರಿಸಿದ್ದಾರೆ. ಕೊನೆಗೆ ಬೇಲೂರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಗುವನ್ನು ರಕ್ಷಣಾ ಘಟಕದ ವಶಕ್ಕೆ ನೀಡಲಾಯಿತು. ಮಗುವನ್ನು ಮಾರಾಟ ಮಾಡಿದ ತಾಯಿಗಾಗಿ ಶೋಧನೆ ಆರಂಭಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.