ಜಮ್ಮು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿಗೆ ಒಳಗಾಗಿ ಹುತಾತ್ಮರಾದ 44 ಯೋಧರಿಗೆ ಪೇಜಾವರ ಮಠದ ಹಿರಿಯ ಸ್ವಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ ನಮನ ಸಲ್ಲಿಸಿದ್ದಾರೆ. ವೀರಮರಣ ಹೊಂದಿದ ಯೋಧರಿಗೆ ಚಿರಶಾಂತಿ ಕೋರಿದ್ದಾರೆ.
ಉಗ್ರರ ಕೃತ್ಯದಿಂದ ಇಂದು ಇಡೀ ದೇಶವೇ ದುಃಖದಲ್ಲಿದೆ. ವೀರ ಮರಣ ಹೊಂದಿದ ಅವರ ಆತ್ಮಗಳಿಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದರು. ಮಹಾಭಾರತದಲ್ಲಿ ದೇಶಕ್ಕಾಗಿ ಹೋರಾಟ ಮಾಡುವ ಸೈನಿಕ ಯೋಗಿಯಷ್ಟೇ ಸಮಾನ. ಯೋಗಿ ಹೇಗೆ ಸದ್ಗತಿ ಹೊಂದಿ ಮುಕ್ತಿ ಹೊಂದುತ್ತಾನೋ ಅದೇ ರೀತಿ, ಈ ಯೋಧರಿಗೂ ಸದ್ಗತಿ ಭಗವಂತ ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
ಕೇಂದ್ರ ಸರಕಾರ ಆ ಭಯೋತ್ಪಾದಕರಿಗೆ ಮರೆಯದ ಪಾಠ ಕಲಿಸಲಿ, ಆದರೆ ಯುದ್ದವಾಗುವ ರೀತಿ ಇರಬಾರದು. ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸರ್ಜಿಕಲ್ ಸ್ಟೈಕ್ ರೀತಿಯ ಒಂದು ಪ್ರಯೋಗವಾಗಿರಬಹುದು ಅಥವಾ ಭಯೋತ್ಪಾದಕರಿಗೆ ಒಂದು ಸಣ್ಣ ಶಾಕ್ ಕೊಡುವಂತಿರಬೇಕು. ಆದರೆ ಯುದ್ದಕ್ಕೆ ಆಹ್ವಾನ ಕೊಡುವಂತಿರಬಾರದು ಎಂದು ಶ್ರೀಗಳು ಉಗ್ರರ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.