Select Your Language

Notifications

webdunia
webdunia
webdunia
webdunia

ಹುತಾತ್ಮ ಯೋಧನ ಮೃತದೇಹ 3ಕ್ಕೆ ಆಗಮನ

webdunia
ಶನಿವಾರ, 16 ಫೆಬ್ರವರಿ 2019 (11:57 IST)
ಹುತಾತ್ಮ ಯೋಧ ಗುರುವಿನ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಏತನ್ಮಧ್ಯೆ ಮೃತ ಯೋಧನ ಪಾರ್ಥಿವ ಶರೀರ 3 ಗಂಟೆಗೆ ಬರಲಿದೆ ಎಂದು ಸಚಿವರು ಹೇಳಿದ್ದಾರೆ.

ಗುಡಿಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರ ಮಧ್ಯ ರಾತ್ರಿಯೇ ಬರುತ್ತೆ ಅಂತ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ವಿಮಾನವನ್ನು ತಿರುಚ್ಚಿಗೆ ಕಳುಹಿಸಿದ್ದಾರೆ. 11.30 ಕ್ಕೆ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಲಿದೆ. ಗುರು ಪತ್ನಿಗೆ ಸರ್ಕಾರಿ ಕೆಲಸ ಹಾಗೂ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಸ್ವತಃ ಸಿಎಂ ಕುಮಾರಸ್ವಾಮಿ ಆಗಮಿಸಿ ಘೋಷಿಸಲಿದ್ದಾರೆ ಎಂದರು.

3 ಗಂಟೆಗೆ ಗುಡಿಗೆರೆಗೆ ಮೃತ ದೇಹ ಬರಲಿದೆ ಎಂದ ಅವರು, ಸಂಜೆ 6ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಹೇಳಿದರು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಪ್ರತಿಕಾರಕ್ಕೆ ಆಗ್ರಹ