Select Your Language

Notifications

webdunia
webdunia
webdunia
webdunia

ಸಿಎಂ ನಮ್ಮ ಕುಟುಂಬ ಸರ್ವನಾಶಲು ಸೂಚನೆ ನೀಡಿದ್ದಾರೆ ಎಂದ ಶಾಸಕ!

ಸಿಎಂ ನಮ್ಮ ಕುಟುಂಬ ಸರ್ವನಾಶಲು ಸೂಚನೆ ನೀಡಿದ್ದಾರೆ ಎಂದ ಶಾಸಕ!
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (16:48 IST)

ಸಿಎಂ ಹಾಗೂ ಅವರ ಸಹೋದರರ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ ಮಾಡಿದ್ದಾರೆ. 

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಹೆಚ್.ಡಿ. ರೇವಣ್ಣ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸರ್ವನಾಶ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಜೆಡಿಎಸ್ ಗೂಂಡಾ ಕಾರ್ಯಕರ್ತರು ತಮ್ಮ ಮನೆಯ ಮೇಲೆ ದಾಂಧಲೆ ನಡೆಸಿ ತಮ್ಮ ಕುಟುಂಬಸ್ಥರನ್ನು ಕೊಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ದೂರಿದ್ದಾರೆ.


ತಮ್ಮ ಮನೆಯ ಮೇಲೆ ದಾಳಿ ಮಾಡಲು ಬಂದಿದ್ದ ಜೆಡಿಎಸ್ ಗೂಂಡಾಕಾರ್ಯಕರ್ತರು ಸಚಿವ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಕುಟುಂಬವನ್ನು ನಾಶ ಮಾಡಲು ಹೇಳಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ದಾಂಧಲೆ ನಡೆದಿದೆ. ಇದರ ಹಿಂದೆ ಸಚಿವ ರೇವಣ್ಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಮ್ಮಕ್ಕಿದೆ ಎಂದು ದೂರಿದರು.Share this Story:

Follow Webdunia kannada

ಮುಂದಿನ ಸುದ್ದಿ

ವಿಟಿಯು ವಿಂಗಡನೆಗೆ ಹೆಚ್ಚುತ್ತಿದೆ ವಿರೋಧ