Publish Date: Sat, 15 Aug 2020 (09:24 IST)
Updated Date: Sat, 15 Aug 2020 (09:27 IST)
ಬೆಂಗಳೂರು : ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿದ್ದಾರೆ.
ಬಳಿಕ ರಾಜ್ಯದ ಜನರನ್ನುದ್ದೇಶಿ ಮಾತನಾಡಿದ ಅವರು, ದೇಶದ ಸ್ವಾಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ನಮನ ಸಲ್ಲಿಸಿದ್ದಾರೆ. ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿ. ಕೊರೊನಾ ಸಂಕಷ್ಟದಲ್ಲೂ ರಾಮರಾಜ್ಯದ ಕನಸು ನನಸಿಗೆ ಯತ್ನ. ನಮ್ಮ ಹೊಣೆಗಾರಿಕೆ ಅರಿತು ಜನಹಿತ ಮನದಲ್ಲಿರಿಸಿ ನಿರ್ಧಾರ. ಜನಪರ ನಿರ್ಧಾರಗಳನ್ನು ನಾವು ಕೈಗೊಂಡಿದ್ದೇವೆ. ಕೊರೊನಾ ಆರೋಗ್ಯ ಕ್ಷೇತ್ರವೊಂದನ್ನೇ ಕಾಡುತ್ತಿಲ್ಲ. ಎಲ್ಲಾ ಕ್ಷೇತ್ರಗಳನ್ನೂ ಕಾಡುತ್ತಿದೆ. ಕೊರೊನಾ ಬಗ್ಗೆ ಯಾರೂ ಸಹ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.