Publish Date: Sat, 15 Aug 2020 (09:09 IST)
Updated Date: Sat, 15 Aug 2020 (16:12 IST)
ನವದೆಹಲಿ: ಪ್ರಧಾನಿ ಮೋದಿ 74 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದು, ಗಡಿ ತಂಟೆ ಮಾಡುವ ಚೀನಾಗೆ ಮಾತಿನ ಏಟು ಕೊಟ್ಟಿದ್ದಾರೆ.
ನಮ್ಮ ದೇಶದ ಸಾರ್ವಭೌಮತೆ ರಕ್ಷಿಸಲು ನಾವು ಯಾವುದಕ್ಕೂ ಸೈ. ಇದನ್ನು ನಮ್ಮ ಸೈನಿಕರು ಇತ್ತೀಚೆಗೆ ಮಾಡಿ ತೋರಿಸಿದ್ದಾರೆ. ಈ ಯೋಧರ ಪ್ರಾಣತ್ಯಾಗವನ್ನು ನಾವು ಇಂದು ಸ್ಮರಿಸಿಕೊಳ್ಳಬೇಕಿದೆ ಎಂದು ಚೀನಾಗೆ ತಿರುಗೇಟು ಕೊಟ್ಟಿದ್ದಾರೆ.
ಮೋದಿ ತಮ್ಮ ಭಾಷಣದುದ್ದಕ್ಕೂ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಒತ್ತು ನೀಡುವಂತೆ ಒತ್ತಾಯಿಸಿದ್ದಾರೆ. ರಕ್ಷಣಾ ಇಲಾಖೆಯಿಂದ ಹಿಡಿದು ಎಲ್ಲಾ ರಂಗದಲ್ಲೂ ನಮ್ಮ ದೇಶ ಇನ್ನೊಂದು ದೇಶವನ್ನು ಅವಲಂಬಿಸದೇ ಆತ್ಮನಿರ್ಭರತೆ ಸಾಧಿಸಬೇಕು ಎಂದು ಮೋದಿ ಪ್ರತಿಪಾದಿಸಿದ್ದಾರೆ.