Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಲಭ್ಯ

webdunia
ಸೋಮವಾರ, 13 ಸೆಪ್ಟಂಬರ್ 2021 (17:01 IST)
ಕರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ೬ ರಿಂದ ೧೦ ನೇ ತರಗತಿವರೆಗಿನ ಶಾಲೆಗಳು ಆರಂಭವಾಗಿದ್ದು, ಶಾಲೆಗಳಿಗೆ ಮಕ್ಕಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ಪಠ್ಯ ಪುಸ್ತಕ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಇಂದಿನಿAದ ಶಾಲೆಗಳಿಗೆ ವಿತರಿಸಲು ಕರ್ನಾಟಕ ರಾಜ್ಯ ಪಠ್ಯ ಪುಸ್ತಕಗಳ ಮುದ್ರಕರ ಸೊಸೈಟಿ ಪುಸ್ತಕಗಳನ್ನು ಅಂಚಿಕೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ. ಒಟ್ಟು ೫,೩೪,೭೬,೩೩೬ ಪಠ್ಯ ಪುಸ್ತಕಗಳ ಅವಶ್ಯಕತೆಯಿದ್ದು, ಅದರಲ್ಲಿ ೪,೭೭,೪೩,೦೦೪ ಮುದ್ರಣಗೊಂಡಿದೆ ಹಾಗೂ ೪,೩೫,೫೯,೮೦೭ ಪಠ್ಯ ಪುಸ್ತಕಗಳು ಆಂಚಿಕೆಗೆ ಸಿದ್ಧವಾಗಿದೆ. 
ಬೆಂಗಳೂರು ಗ್ರಾಮಾಂತರಕ್ಕೆ ಒಟ್ಟು ಅವಶ್ಯಕತೆ ಇರುವ ಪುಸ್ತಕಗಳು ೭,೫೫,೨೪೧ ವಿತರಣೆಯಾಗಲಿರುವ ಪುಸ್ತಕಗಳು ೭,೨೨,೧೬೦. ಬೆಂಗಳೂರು ಉತ್ತರ ಒಟ್ಟು ಅವಶ್ಯಕತೆ ಇರುವ ಪುಸ್ತಕಗಳು ೧೯,೧೯,೩೬೯ ವಿತರಣೆಯಾಗಲಿರುವ ಪುಸ್ತಕಗಳು ೧೮,೩೯,೯೧೯.
ಆಯಾ ಜಿಲ್ಲೆಯ ವಿದ್ಯಾಧಿಕಾರಿಗಳ ಮುಖಾಂತರ ಪುಸ್ತಕಗಳನ್ನು ಅಂಚಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಬಹುಶಹ ಈ ವಾರಾಂತ್ಯದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕ ವಿತರಣೆಯಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ಮತ್ತು ನಿಫಾ ವೈರಸ್ ನೆರೆಯ ರಾಜ್ಯದಲ್ಲಿ ಹೆಚ್ಚಳ