Select Your Language

Notifications

webdunia
webdunia
webdunia
webdunia

ನಗರದಲ್ಲಿ ಮಕ್ಕಳಿಗೆ ವಿತರಣೆಯಾದ ಪರಿಸರ ಸ್ನೇಹಿಯಾದ 3000 ಸಾವಿರ ಗಣೇಶ ಮೂರ್ತಿಗಳು

ನಗರದಲ್ಲಿ ಮಕ್ಕಳಿಗೆ ವಿತರಣೆಯಾದ ಪರಿಸರ ಸ್ನೇಹಿಯಾದ 3000 ಸಾವಿರ ಗಣೇಶ ಮೂರ್ತಿಗಳು
bangalore , ಗುರುವಾರ, 9 ಸೆಪ್ಟಂಬರ್ 2021 (19:42 IST)
ಬೆಂಗಳೂರು: ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯನಗರದ ಈಸ್ಟ್ ವೆಸ್ಟ್ ಸ್ಕೂಲ್ ಬಳಿ ಕೆಂಗಲ್  ಹನುಮಂತಯ್ಯ ಟ್ರಸ್ಟ್  ಮತ್ತು ಮಲ್ಲೇಶ್ವರಂ ವಿಧಾನಸಭಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಪರಿಸರ ಸ್ನೇಹಿ 3000ಗಣೇಶ ಮೂರ್ತಿಗಳನ್ನು ಟ್ರಸ್ಟ್  ನ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾದರೇಣುರವರು ಮಕ್ಕಳಿಗೆ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
 
ಈ  ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಅಧ್ಯಕ್ಷರಾದ  ಪಾದರೇಣು ಮಾತನಾಡಿ ಇಂದಿನ ಮಕ್ಕಳೆ ದೇಶದ ಮುಂದಿನ ಉತ್ತಮ ಪ್ರಜೆಗಳಬೇಕು ,ತಂದೆ ,ತಾಯಿ ಮತ್ತು ಗುರುಗಳಿಗೆ ಗೌರವ ತರುವ ಹಾಗೇ ಉತ್ತಮ ನಡತೆ ಬೆಳಸಿಕೊಳ್ಳಬೇಕು .ಎಲ್ಲರು ಒಂದೇ ಎಂಬ ಭಾವನೆ ಬರಬೇಕು ಈ ನಿಟ್ಟಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಗಾಯಿತ್ರಿನಗರ ,ಸುಬ್ರಮಣ್ಯನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ ,ಅರಮನೆನಗರ ,ಆಶ್ವಥ್ ನಗರ ಎಸ್.ಸಿ/ಎಸ್.ಟಿ ಕಾಲೋನಿ ಮಕ್ಕಳಿಗೆ 3 ಸಾವಿರ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು.
 
ಇದರಿಂದ ಮಕ್ಕಳು ಸಹ ಪರಿಸರ ಬಗ್ಗೆ ಅರಿವು ,ಮಕ್ಕಳು ಸಹ ಸಮಾಜದಲ್ಲಿ ಸಂಘಟಿತರಾಗಿ ದೇಶ ಸೇವೆ ಮಾಡಲಿ ಎಂಬ ಆಶಯ ನಮ್ಮದು .
ದೇಶದಲ್ಲಿ ಕೊರೋನ ಸಾಂಕ್ರಮಿಕ ರೋಗದಿಂದ ಕಳೆದ  18ತಿಂಗಳಿಂದ ಬಡವರ ಮತ್ತು ಮಧ್ಯಮ ವರ್ಗದವರ ಆರ್ಥಿಕವಾಗಿ ಸಂಕಷ್ಟ ಮತ್ತು ಉದ್ಯೋಗವಿಲ್ಲ ಜೀವನ ಸಾಗಿಸುವುದು ಕಷ್ಟಕರವಾಗಿದೆ.ಈ ಬಾರಿ ಗಣೇಶ ಹಬ್ಬವು ಕೊರೋನ ಮುಕ್ತವಾಗಲಿ ,ಎಲ್ಲರ ಜೀವನದಲ್ಲಿ ಸುಖ ,ಶಾಂತಿ ಮತ್ತು ನೆಮ್ಮದ್ದಿ ಸಿಗಲಿ ಎಂದು ಗಣೇಶ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ganesha

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಮಕ್ಕಳಿಂದ ಮರ ಕಡಿಯದಂತೆ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ