Publish Date: Sat, 07 Oct 2023 (21:05 IST)
Updated Date: Sat, 07 Oct 2023 (19:36 IST)
ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಭೀಕರ ಅಪಘಾತ ನಡೆದಿದೆ.ಹೆಚ್ ನಾಗರಾಜ್ ಇಂಗ್ಲೀಷ್ ಪ್ರೊಪೆಸರ್ ನಿಂದ ಅಪಘಾತ ನಡೆದಿದ್ದು,ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರಗೊಂಡಿದ್ದಾರೆ.ಒಬ್ಬ ಮ್ಯೂಸಿಕ್ ಟೀಚರ್ ಜ್ಯೋತಿಗೂ ಗಾಯವಾಗಿದೆ.ಅಶ್ವಿನಿ ಬಿಕಾಂ ವಿದ್ಯಾರ್ಥಿ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ.ಕ್ಯಾಂಪಸ್ ನಲ್ಲೇ ಓವರ್ ಸ್ಪೀಡ್ ನಲ್ಲಿ ನಾಗರಾಜ್ ಚಾಲನೆ ಮಾಡಿದ್ದು,ಗಂಭೀರವಾಗಿ ಗಾಯಗೊಂಡ ಅಶ್ವಿನಿ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕ್ಯಾಂಪಸ್ ನಲ್ಲೇ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ ನಾಗರಾಜ್ ನಿಯಂತ್ರಣ ತಪ್ಪಿ ಅಪಘಾತ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗಾಯಾಳುಗಳನ್ನ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬೆಳಿಗ್ಗೆ 9:30ರ ಸುಮಾರಿಗೆ ಘಟನೆ ನಡೆದಿದೆ.