Publish Date: Mon, 02 Oct 2023 (19:43 IST)
Updated Date: Mon, 02 Oct 2023 (18:52 IST)
ನಿಯಂತ್ರಣ ತಪ್ಪಿದ ಕಾರು ರಸ್ತೆ ಮಧ್ಯದ ಡಿವೈಡರ್ಗೆ ಗುದ್ದಿ ಎರಡು ಜೀವವನ್ನ ಬಲಿ ಪಡೆದಿರೋ ಭೀಕರ ಅಪಘಾತ ನಡೆದಿರೋದು ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ.ರಸ್ತೆಯಲ್ಲಿ ಕಾರೊಂದು ಚಲಿಸುತ್ತಾ ಬರ್ತಿತ್ತು ಹೀಗೆ ಬರುವಾಗ ಕಾರು ನಿಯಂತ್ರಣ ತಪ್ಪಿ, ರಸ್ತೆಯಿಂದ ಪಕ್ಕಕ್ಕೆ ಸರಿದಿದೆ ಅಷ್ಟೇ ಅಲ್ಲದೇ ಡಿವೈಡರ್ಗೂ ಗುದ್ಬಿಟ್ಟಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಪಾರ್ಟ್ಸ್ಗಳು ರಸ್ತೆಯಲ್ಲೇ ಚಲ್ಲಾಪಿಲ್ಲಿಯಾಗಿಬಿಟ್ಟಿವೆ.ಇನ್ನು, ಈ ಅಪಘಾತದಲ್ಲಿ ಕಾರಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ.ಹಾಗೂ ಜೊತೆಗಿದ್ದ ನಾಲ್ವರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ದಂಪತಿ ಮೃತಪಟ್ಟಿದ್ದಾರೆ.