Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಬೆಳಗಿನ ಜಾವ ಭೀಕರ ಅಪಘಾತ

accident
bangalore , ಮಂಗಳವಾರ, 3 ಅಕ್ಟೋಬರ್ 2023 (15:00 IST)
ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ಬೆಳ್ಳಬೆಳ್ಳಗೆ ಭೀಕರ ಅಪಘಾತ ನಡೆದಿದೆ.ಒಂದೆ ಕುಟುಂಬದ ನಾಲ್ವರು ಪ್ರಯಾಣ ಮಾಡ್ತಿದ್ದ ಕಾರ್ ನಲ್ಲಿ ಅಪಘಾತ ಸಂಭವಿಸಿದೆ.ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿದ್ದ ಕಾರಿನಲ್ಲಿ ಮಹೇಂದ್ರನ್, ಸಿಂಧು ಮತ್ತು ಎರಡು ಮಕ್ಕಳು  ಇದ್ರು.ಈ ವೇಳೆ ಸಿಂಧು ಮತ್ತು ಎರಡು ವರ್ಷದ ಒಂದು ಮಗು ಸಾವಾನಾಪ್ಪಿದ್ದಾರೆ.ಮಹೇಂದ್ರನ್ ಮತ್ತು ಒಂದು ಮಗು ಅಸ್ಪತ್ರೆಗೆ ದಾಖಲಾಗಿದೆ.4 ಘಂಟೆ ಸಮಯದಲ್ಲಿ ನಿದ್ರೆಯ ಮಂಪರಿನಲ್ಲಿ  ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.ರಸ್ತೆಯಿಂದ ಹೊರಬಂದು  ಲಾರಿ ಮತ್ತು  ಮೋರಿಯ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದಿದೆ.ಕಾರಿನ ಡಿಕ್ಕಿ ರಭಸಕ್ಕೆ ಲಾರಿ ಸಹ ಪಲ್ಟಿ ಹೊಡೆದಿದೆ.ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಸಿಂಧು ಮತ್ತು ಎರಡು ವರ್ಷದ ಪುಟ್ಟ ಮಗು ಸಾವನಾಪ್ಪಿದೆ.ಘಟನೆ ಸಂಬಂಧ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದಾರೆ.ಅಲ್ಲದೇ ಮೃತ ದೇಹಗಳನ್ನ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ‌.ಹತ್ತಿರದ ಖಾಸಗಿ ಆಸ್ಪತ್ರೆಗೆಯಲ್ಲಿ ಗಾಯಾಳು ಮಹೇಂದ್ರ ಮತ್ತು ಒಂದು ಮಗು ದಾಖಲಾಗಿದೆ.ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲೂ ಜಾತಿ ಸಮೀಕ್ಷೆ ಅಂಗೀಕಾರಕ್ಕೆ ಒತ್ತಾಯದ ಬಗ್ಗೆ ಸರ್ಕಾರದ ತೀರ್ಮಾನ ಅಂತಿಮ..!