ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಕೋವಿಡ್ 19 ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸೇವೆ ಆರಂಭಿಸಲಾಗಿದೆ.
ರಾಮನಗರದಲ್ಲಿ ಟೆಲಿ ಐಸಿಯು ಸೇವೆ ಶುರುವಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಮನಗರದ ಕೋವಿಡ್ - 19 ಆಸ್ಪತ್ರೆಯಲ್ಲಿ 24 ತಾಸು ಕಾರ್ಯನಿರ್ವಹಿಸುವ 16 ಹಾಸಿಗೆಯ ಟೆಲಿ ಐಸಿಯು ವ್ಯವಸ್ಥೆ ಆರಂಭಿಸಲಾಗಿದೆ.
ಕಮ್ಯಾಂಡ್ ರೂಮ್‌ನಿಂದಲೇ ತಜ್ಞ ವೈದ್ಯರು ಈ ರಿಮೋಟ್ ಐಸಿಯು ಘಟಕ ನಿರ್ವಹಿಸಲು ಸಾಧ್ಯವಿದ್ದು, ಐಸಿಯುವಿನಲ್ಲಿರುವ ರೋಗಿಗಳ ಸ್ಥಿತಿಯನ್ನು ಪರಿಶೀಲಿಸಿ ಇಲ್ಲಿನ ವೈದ್ಯ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬಹುದು ಎಂದು ಅವರು ವಿವರಿಸಿದರು.