Select Your Language

Notifications

webdunia
webdunia
webdunia
webdunia

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್

Tejasvi Yadav

Krishnaveni K

ಪಾಟ್ನಾ , ಸೋಮವಾರ, 4 ಆಗಸ್ಟ್ 2025 (11:24 IST)
ಪಾಟ್ನಾ: ನನ್ನ ಹೆಸರು ವೋಟರ್ ಲಿಸ್ಟ್ ನಿಂದ ಕಿತ್ತು ಹಾಕಲಾಗಿದೆ ಎಂದು ಆರೋಪ ಮಾಡಲು ಹೋಗಿ ಬಿಹಾರದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂಡಿಯಾ ಒಕ್ಕೂಟದ ಪಕ್ಷಗಳು ಈಗ ಚುನಾವಣಾ ಆಯೋಗದ ವಿರುದ್ಧವೇ ಅಕ್ರಮ ಆರೋಪ ಮಾಡುತ್ತಿವೆ. ಮತದಾರರ ಪಟ್ಟಿಯಿಂದ ಮತದಾರರ ಪಟ್ಟಿಯನ್ನು ತಮಗಿಷ್ಟ ಬಂದಂತೆ ಚುನಾವಣಾ ಆಯೋಗ ಕಿತ್ತು ಹಾಕಿ ಮತ್ತು ಸೇರಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸುತ್ತಿದೆ.

ಇದೀಗ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವೇಳೆ ನನ್ನ ಹೆಸರನ್ನೂ ಚುನಾವಣಾ ಆಯೋಗ ಕಿತ್ತು ಹಾಕಿದೆ ನೋಡಿ ಎಂದು ತೇಜಸ್ವಿ ಯಾದವ್ ಮೊನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮೊಬೈಲ್ ಗೆ ವೆಬ್ ಸೈಟ್ ಕ್ಲಿಕ್ ಮಾಡಿ ಪ್ರದರ್ಶನ ಮಾಡಿದ್ದರು.

ಆದರೆ ತೇಜಸ್ವಿ ಯಾದವ್ ನೀಡಿದ್ದ ಮತದಾರರ ಗುರುತಿನ ಚೀಟಿಯ ಸಂಖ್ಯೆ ಪರಿಶೀಲಿಸಿದಾಗ ಚುನಾವಣಾ ಆಯೋಗಕ್ಕೆ ಅಸಲಿಯತ್ತು ತಿಳಿದುಬಂದಿದೆ. ತೇಜಸ್ವಿ ಯಾದವ್ ನಿಜವಾದ ವೋಟರ್ ಐಡಿ ಈಗಲೂ ಚಾಲ್ತಿಯಲ್ಲಿದೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದು ನಕಲಿ ಐಡಿ ಎಂದು ಪತ್ತೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ