Select Your Language

Notifications

webdunia
webdunia
webdunia
webdunia

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ

Shibu Soren

Krishnaveni K

ರಾಂಚಿ , ಸೋಮವಾರ, 4 ಆಗಸ್ಟ್ 2025 (11:05 IST)
ರಾಂಚಿ: ಜಾರ್ಖಂಡ್ ನ ಮಾಜಿ ಸಿಎಂ, ಜೆಎಂಎಂ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಶಿಬು ಸೊರೇನ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಶಿಬು ಸೊರೇನ್ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅವರ ಪುತ್ರ, ಜಾರ್ಖಂಡ್ ನ ಹಾಲಿ ಸಿಎಂ ಹೇಮಂತ್ ಸೊರೇನ್ ತಮ್ಮ ತಂದೆಯ ನಿಧನದ ಸುದ್ದಿಯನ್ನು ಎಕ್ಸ್ ನಲ್ಲಿ ಖಚಿತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ‘ಪ್ರೀತಿಯ ದಿಶೋಮ್ ಗುರೂಜಿ ನಮ್ಮನ್ನು ಅಗಲಿದ್ದಾರೆ. ಇಂದು ನಾನು ಎಲ್ಲವನ್ನೂ ಕಳೆದುಕೊಂಡೆ’ ಎಂದು ಅವರು ಸಂದೇಶ ಬರೆದುಕೊಂಡಿದ್ದಾರೆ.

ಜಾರ್ಖಂಡ್ ಸಿಎಂ ಮಾತ್ರವಲ್ಲದೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಸುಮಾರು 4 ದಶಕಗಳ ರಾಜಕೀಯ ಅನುಭವ ಅವರದ್ದಾಗಿತ್ತು. ಇದೀಗ ಅವರ ನಿಧನಕ್ಕೆ ಬೆಂಬಲಿಗರು, ರಾಜಕೀಯ ವಲಯ ಸಂತಾಪ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೋಟ್ ಗಾಗಿ ಟಿಪ್ಪು ಸಂತತಿಯನ್ನು ವೈಭವೀಕರಿಸೋದು ಕಾಂಗ್ರೆಸ್ ಜಾಯಮಾನ: ವಿಜಯೇಂದ್ರ