ನವದೆಹಲಿ: ಹೆಚ್ಚುವರಿ ತೂಕವಿದ್ದ ಬ್ಯಾಗ್‌ಅನ್ನು ವಿಮಾನದಲ್ಲಿ ಹೊತ್ತೊಯ್ಯಲು ನಿರಾಕರಿಸಿದ್ದಕ್ಕೆ ಹಿರಿಯ ಸೇನಾಧಿಕಾರಿಯೊಬ್ಬರು ಸ್ಪೈಸ್ ಜೆಟ್ ಸಂಸ್ಥೆಯ ಎಸ್‌ಜಿ 386 ವಿಮಾನದ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಬೆನ್ನುಮೂಳೆಯ ಮುರಿತ ಸೇರಿದಂತೆ ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದುಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೂ ಹೆಸರು ಬಹಿರಂಗಪಡಿಸದ ಅಧಿಕಾರಿ, ಏರ್‌ಲೈನ್‌ನ ಪ್ರಕಾರ, 7 ಕೆಜಿಗಿಂತ ಹೆಚ್ಚಿನ ಕ್ಯಾಬಿನ್ ಲಗೇಜ್ ಅನ್ನು ಹೆಚ್ಚುವರಿ ಶುಲ್ಕದಲ್ಲಿ ಅನುಮತಿಸಲಾಗಿದೆ ಎಂದು ಹೇಳಿದ ನಂತರ ವಿಮಾನಯಾನ ಸಿಬ್ಬಂದಿಗೆ ಪದೇ ಪದೇ ಗುದ್ದಿ ಮತ್ತು ಒದೆಯುತ್ತಾರೆ ಮತ್ತು ಒಬ್ಬರ ಮೇಲೆ ಕ್ಯೂ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದರು.
ಗಂಭೀರ ಹಲ್ಲೆಯಿಂದ ಒಬ್ಬ ನೌಕರ ಅಲ್ಲೇ ಮೂರ್ಛೆ ಹೋಗಿದ್ದು, ಆದರೂ ಹಲ್ಲೆ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ.