Webdunia - Bharat's app for daily news and videos

Install App

ಹೀಗೇ ಬಿಟ್ರೆ ಧರ್ಮಸ್ಥಳ, ಶೃಂಗೇರಿ ದೇವಾಲಯನೂ ವಕ್ಫ್ ನದ್ದು ಅಂತಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

Krishnaveni K
ಶನಿವಾರ, 2 ನವೆಂಬರ್ 2024 (15:52 IST)
ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೀಗೇ ಬಿಟ್ಟರೆ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳ, ಶೃಂಗೇರಿಯಂತಹ ಪ್ರಮುಖ ದೇವಾಲಯಗಳನ್ನೂ ವಕ್ಫ್ ನದ್ದು ಎನ್ನುತ್ತಾರೆ ಎಂದಿದ್ದಾರೆ.

ಹಲವು ಜಿಲ್ಲೆಗಳಲ್ಲಿ ರೈತರು, ಮಠ, ಮಂದಿರಗಳಿಗೂ ವಕ್ಫ್ ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಇಂದು ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು. ಸಿಂಎ ಸೂಚನೆ ಮೇರೆಗೇ ಜಮೀರ್ ಅಹ್ಮದ್ ವಕ್ಫ್ ಅದಾಲತ್ ಗೆ ಕರೆದಿದ್ದಾರೆ. ವಕ್ಫ್ ಅದಾಲತ್ ಕಾಂಗ್ರೆಸ್ ಸರ್ಕಾರದ ಅಸಂವಿಧಾನಿಕ ಅನ್ವೇಷಣೆ. ಇದಕ್ಕೆ ಕಾನೂನಿನ ಮಾನ್ಯತೆ ಎಲ್ಲಿದೆ? ವಕ್ಫ್ ಅದಾಲತ್ ನಿಲ್ಲಿಸುವವರೆಗೂ ನಮ್ಮ ಹೋರಾಟ ನಿಲ್ಲಿಸಲ್ಲ ಎಂದು ಅವರು ಹೇಳಿದ್ದಾರೆ.

ಇಸ್ಲಾಂ ಹುಟ್ಟುವುದಕ್ಕೂ ಮುನ್ನ ಇರುವ ದೇವಸ್ಥಾನಗಳ ಆಸ್ತಿಯೂ ನಮ್ಮದು ಎನ್ನುತ್ತಿದ್ದಾರೆ. ಕಾಂಗ್ರೆಸ್ ನವರು ಉಚಿತ ಬಸ್, ಅಕ್ಕಿ ಕೊಡ್ತಾರೆ ಎಂದು ಅವರಿಗೆ ವೋಟ್ ಹಾಕಿದರೆ ನಮ್ಮ ದೇವಸ್ಥಾನ, ಮನೆ ಮಠ ಎಲ್ಲಾ ತೆಗೆದುಕೊಂಡು ಸಾಬರಿಗೆ ಕೊಟ್ಟು ಬಿಡುತ್ತಾರೆ. ಹೀಗೇ ಕಾಂಗ್ರೆಸ್ ಉಚಿತಕ್ಕೆ ಮರುಳಾಗಿ ವೋಟ್ ಹಾಕುತ್ತಿದ್ದರೆ ಮುಂದೆ ಧರ್ಮಸ್ಥಳ, ಶೃಂಗೇರಿಯೂ ಇರಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ವಕ್ಫ್ ಕಾನೂನಿಗೆ ತಿದ್ದುಪಡಿ ತರಲು ಜೆಪಿಸಿ ಅನುಷ್ಠಾನಕ್ಕೆ ಬಂದಿದೆ. ಇದೇ ನವಂಬರ್ 6,7 ರಂದು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹುಬ್ಬಳ್ಳಿ, ಬೆಂಗಳೂರಿಗೆ ಬಂದು ರೈತರ ಅಹವಾಲುಗಳನ್ನು ಸ್ವೀಕರಿಸಲು ಮನವಿ ಮಾಡಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments