Select Your Language

Notifications

webdunia
webdunia
webdunia
webdunia

ಮೈಸೂರ್ ಪಾಕ್ ಕೊಟ್ಟು ಲೈವ್ ನಲ್ಲಿ ಗುಡ್ ನ್ಯೂಸ್ ಹೇಳಿದ ಸಂಸದ ತೇಜಸ್ವಿ ಸೂರ್ಯ

Tejasvi Surya

Krishnaveni K

ನವದೆಹಲಿ , ಗುರುವಾರ, 16 ಜನವರಿ 2025 (14:49 IST)
ನವದೆಹಲಿ: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮೈಸೂರ್ ಪಾಕ್ ಕೊಟ್ಟು ಸಿಹಿ ಸುದ್ದಿಯೊಂದನ್ನು ಲೈವ್ ಅಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 17 ರಿಂದ ಅಂದರೆ ನಾಳೆಯಿಂದ ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸಲ್ಯೂಟ್ ಆರಂಭವಾಗುತ್ತಿದೆ. ಇದಕ್ಕಾಗಿ ಬೆಂಗಳೂರಿಗರ ಪರವಾಗಿ ತೇಜಸ್ವಿ ಸೂರ್ಯ ಜೈಶಂಕರ್ ಪ್ರಸಾದ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕಾಗಿ ಅವರು ಬರಿಗೈಯಲ್ಲಿ ಹೋಗಿರಲಿಲ್ಲ. ಬೆಂಗಳೂರಿನಿಂದ ಕರ್ನಾಟಕ ಪ್ರಸಿದ್ಧ ಮೈಸೂರ್ ಪಾಕ್ ಸಿಹಿತಿಂಡಿಯನ್ನು ತೆಗೆದುಕೊಂಡು ಹೋಗಿದ್ದರು. ಜೈಶಂಕರ್ ಪ್ರಸಾದ್ ಅವರಿಗೆ ಮೈಸೂರ್ ಪಾಕ್ ಕೊಟ್ಟು ಈ ಇನ್ನು ಮುಂದೆ ಬೆಂಗಳೂರಿನಲ್ಲೂ ಅಮೆರಿಕಾ ಕಾನ್ಸಲ್ಯೂಟ್ ಕಚೇರಿ ಆರಂಭವಾಗಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.

ಇನ್ನು ತೇಜಸ್ವಿ ಸೂರ್ಯ ಬಳಿ ಮೈಸೂರ್ ಪಾಕ್ ಪಡೆದು ಧನ್ಯವಾದ ಸಲ್ಲಿಸಿದ ಜೈಶಂಕರ್ ಪ್ರಸಾದ್, ನನಗೂ ಬೆಂಗಳೂರಿನ ಮೇಲೆ ವಿಶೇಷ ಪ್ರೀತಿಯಿದೆ. ಬೆಂಗಳೂರಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಪ್ರಯತ್ನ ಮಾಡಿದ್ದೇನೆ. ಈ ವಿಶೇಷ ಮೈಸೂರ್ ಪಾಕ್ ಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು ಮುಂದೆ ಅಮೆರಿಕಾ ವೀಸಾಕ್ಕಾಗಿ ಕರ್ನಾಟಕದ ಮಂದಿ ಚೆನ್ನೈ, ಹೈದರಾಬಾದ್ ಎಂದು ಬೇರೆ ರಾಜ್ಯಗಳ ಕಾನ್ಸಲ್ಯೂಟ್ ಕಚೇರಿಗೆ ಅಲೆಯಬೇಕಾಗಿಲ್ಲ. ಬೆಂಗಳೂರಿನಲ್ಲೇ ಅಮೆರಿಕಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಇದು ಅಮೆರಿಕಾಗೆ ತೆರಳುವ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೈಫ್ ಅಲಿ ಖಾನ್ ಮೇಲೆ ದಾಳಿಯಾಗುವಾಗ ಮೋದಿ ಮುಂಬೈನಲ್ಲಿದ್ದರು: ಸಂಜಯ್ ರಾವತ್ ಆರೋಪ (video)