Select Your Language

Notifications

webdunia
webdunia
webdunia
webdunia

ಶಿಕ್ಷಕ ವೃತ್ತಿ ಜೊತೆ ಮೋದಿಕೇರ್ ವ್ಯವಹಾರ ನಡೆಸುತ್ತಿದ್ದ ಶಿಕ್ಷಕರಿಗೆ ಅಮಾನತು ಭಾಗ್ಯ

ಶಿಕ್ಷಕ ವೃತ್ತಿ ಜೊತೆ ಮೋದಿಕೇರ್ ವ್ಯವಹಾರ ನಡೆಸುತ್ತಿದ್ದ ಶಿಕ್ಷಕರಿಗೆ ಅಮಾನತು ಭಾಗ್ಯ
bangalore , ಬುಧವಾರ, 15 ಫೆಬ್ರವರಿ 2023 (15:26 IST)
8 ಜನ ಶಿಕ್ಷಕರನ್ನು ಅಮಾನತುಗೊಳಿಸಿ‌ ಸಾರ್ವಜನಿಕ ಶಿಕ್ಷಣ ಇಲಾಖೆ‌ ಆದೇಶ ಹೊರಡಿಸಿದೆ.ಚೈನ್ ಲಿಂಕ್ ವ್ಯವಹಾರದಲ್ಲಿ ಶಿಕ್ಷಕರು ತೊಡಗಿದ್ದರು‌ ಅನ್ನೋ ಮಾಹಿತಿ ಲಭಿಸಿದ್ದು,ಈ ಹಿಂದೆ ಶಿಕ್ಷಕರ ಅವ್ಯವಾಹರದ ಬಗ್ಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ರು.
 
ಈ ಹಿನ್ನೆಲೆ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ೧೬ ಶಿಕ್ಷಕರ ವಿಚಾರಣೆ ನಡೆಸಲಾಗಿದೆ.ಅದರಲ್ಲಿ ೮ ಜನ ಶಿಕ್ಷಕರು ಅಗತ್ಯ ದಾಖಲೆ‌ ನೀಡಿ ವಿವರಣೆ ನೀಡಿದ್ರು.ಇನ್ನುಳಿದ ೮ ಮಂದಿಯ ವಿಚಾರಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಅಮಾನತು ಮಾಡಲಾಗಿದೆ.ಇಷ್ಟಕ್ಕೆ ಸುಮ್ಮನಾಗದ  ಖಾಸಗಿ ಶಾಲಾ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂ ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಕರ್ ರೆಡ್ಡಿಗೆ ಐಟಿ ಶಾಕ್