Publish Date: Wed, 15 Feb 2023 (14:11 IST)
Updated Date: Wed, 15 Feb 2023 (14:15 IST)
ಡಿಕೆಶಿ ಸಿದ್ದರಾಮಯ್ಯ ಆರೋಪಕ್ಕೆ ಸದನದಲ್ಲಿ ಉತ್ತರ ಕೊಡ್ತೀನಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.ಅವರು ಮಾಡಿದ್ದನ್ನ ನಮಗೆ ಹೇಳುತ್ತಿದ್ದಾರೆ.ಟೆಂಡರ್ ಮಾಡೋದು ಅವರಿಗೆ ಅನುಭವ ಇರಬೇಕು, ಅದಕ್ಕೆ ನಮಗೆ ಹೇಳುತ್ತಿದ್ದಾರೆ.ಅಧಿವೇಶನ ನಡೆಯುತ್ತಿದೆ ಸದನದಲ್ಲೇ ಉತ್ತರ ಕೊಡ್ತೀನಿ ಎಂದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್‌ನವರು ತಾವು ಮಾಡಿದ ಅನುಭವದಿಂದ ಮಾತಾಡ್ತಿದಾರೆ.ತನಿಖೆ ಮಾಡಿಸ್ತೀವಿ ಅಂತಾ ಧಮಕಿ ಹಾಕ್ತಿದಾರೆ.ಈ ಹಿಂದೆ 40% ಕಮೀಷನ್ ಆರೋಪ ಮಾಡಿದ್ರು.ಅದಕ್ಕೇ ಇನ್ನೂ ದಾಖಲೆ ಕೊಟ್ಟಿಲ್ಲ.ಮೊದಲು ಅದಕ್ಕೆ ದಾಖಲೆ ಕೊಡಲಿ ಅವರು.ಇದುವರೆಗೆ ಕಾಂಗ್ರೆಸ್‌ನವರು ಒಂದೇ ಒಂದು ಆರೋಪ ಸಾಬೀತು ಮಾಡಲಿಲ್ಲ.ಅವರ ಬಳಿ ನೀರಾವರಿ ಟೆಂಡರ್ ದಾಖಲೆಗಳಿದ್ರೆ ಕೊಡಲಿ.ಗಾಳಿಯಲ್ಲಿ ಗುಂಡು ಹಾರಿಸೋದುನ್ನು ಕಾಂಗ್ರೆಸ್‌ನವರು ಬಿಡಲಿ.ಗೂಳಿಹಟ್ಟಿ ಶೇಖರ್ ಅವರಿಗೂ ದಾಖಲೆ ಕೊಡಲು ಹೇಳಿದ್ದೇವೆ.ಗೂಳಿಹಟ್ಟಿ ಶೇಖರ್ ಪತ್ರ ಬರೆದಿರೋದು ಗೊತ್ತಿದೆ.ದಾಖಲೆ ಇದ್ರೆ ಕೊಡಿ ಅಂತ ಕೇಳಿದೀವಿ ಎಂದು ಸಿಎಂ ಹೇಳಿದ್ದಾರೆ.