Publish Date: Wed, 15 Feb 2023 (13:36 IST)
Updated Date: Wed, 15 Feb 2023 (13:41 IST)
ಬೆಂಗಳೂರು : ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದೆ. ಇದು ಚುನಾವಣಾ ಸಮರದ ಸಮಯ. ನಾವೆಲ್ಲರೂ ದಣಿವರಿಯದೆ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ರಾಜ್ಯವು ಅತಿ ಹೆಚ್ಚು ಜಿಎಸ್ಟಿ ಸಂಗ್ರಹಿಸುತ್ತಿದ್ದು,
ಗುರಿ ಮೀರಿ ಶೇ 23ರಷ್ಟು ಹೆಚ್ಚು ಕಂದಾಯ ಸಂಗ್ರಹವಾಗಿದೆ. ಬಡವರ ಪರವಾಗಿ ನಮ್ಮ ನಿಲುವಿದೆ. ಕಮಲ ಅರಳಿಸಿ, ಅಧಿಕಾರ ಗಳಿಸುವ ಸಂಕಲ್ಪ ನಮ್ಮದಾಗಬೇಕು ಎಂದು ಹೇಳಿದರು.