ಮನೆಯೊಳಗೇ ಬಿಡಲ್ಲ ಶಿಕ್ಷಕರು ಎಂದರೂ ನಂಬಲ್ಲ: ಜಾತಿ ಸಮೀಕ್ಷೆ ಮಾಡುವ ಶಿಕ್ಷಕರ ಅಳಲು

Krishnaveni K
ಬುಧವಾರ, 8 ಅಕ್ಟೋಬರ್ 2025 (08:50 IST)
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಭಾನುವಾರದಿಂದ ಜಾತಿ ಸಮೀಕ್ಷೆ ಗಣತಿ ಕೆಲಸ ಆರಂಭವಾಗಿದೆ. ಶಿಕ್ಷಕರು ಬೆಳಗ್ಗಿನಿಂದ ಸಂಜೆಯವರೆಗೆ ಮನೆ ಮನೆಗೆ ತಿರುಗಾಡಿ ಗಣತಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಅಳಲು ಕೇಳುವವರೇ ಇಲ್ಲದಂತಾಗಿದೆ.

ಜಾತಿಗಣತಿ ಮಾಡಲು ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಒಂದು ದಿನಕ್ಕೆ 20 ಮನೆಗೆ ಟಾರ್ಗೆಟ್ ನೀಡಲಾಗಿದೆ. ಆದರೆ ಬಹುತೇಕ ಮನೆಗಳಲ್ಲಿ ಹಗಲು ಹೊತ್ತು ಯಾರೂ ಇರಲ್ಲ. ಹೀಗಾಗಿ ಕತ್ತಲಾದ ಮೇಲೂ ಮನೆ ಮನೆಗೆ ಹೋಗಬೇಕು.

ಇದೀಗ ಜಾತಿ ಗಣತಿಗಾಗಿ ಸರ್ಕಾರೀ ಶಾಲೆಗಳನ್ನು ಅಕ್ಟೋಬರ್ 18 ರವರೆಗೆ ಬಂದ್ ಮಾಡಲಾಗಿದೆ. ಹೀಗಾಗಿ ಶಿಕ್ಷಕರಿಗೆ ಫುಲ್ ಟೈಂ ತಿರುಗಾಡುವುದೇ ಕೆಲಸ. ಅದರಲ್ಲೂ ಕೆಲವು ಮನೆಗಳಲ್ಲಿ ಮನೆಯೊಳಗೇ ಬಿಟ್ಕೊಳ್ಳಲ್ಲ. ಬಾಗಿಲ ಮುಂದೆ ಬಂದರೂ ಇಲ್ಲಿಂದ ಹೋಗಿ ಎಂದು ತೀರಾ ಅವಮಾನ ಮಾಡುತ್ತಾರೆ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಇದು ಬಹುತೇಕರಿಗೆ ಆಗುತ್ತಿರುವ ಅನುಭವ.

ಕೆಲವರು ನಾವು ಶಿಕ್ಷಕರು ಎಂದು ಐಡಿ ಕಾರ್ಡ್ ತೋರಿಸಿದ್ರೂ ನಂಬಲ್ಲ. ಬಾಯಿಗೆ ಬಂದ ಹಾಗೆ ಮಾತನಾಡಿ ಅವಮಾನ ಮಾಡುತ್ತಾರೆ ಎಂದು ಗಣತಿಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರೊಬ್ಬರು ಹೇಳುತ್ತಾರೆ. ಒಂದು ದಿನಕ್ಕೆ ಕನಿಷ್ಠ 20 ಮನೆ ಆಗಬೇಕು ಅಂತಾರೆ. ಕೆಲವರು ಸರಿಯಾಗಿ ಮಾಹಿತಿ ಕೊಡುತ್ತಾರೆ ಮತ್ತೆ ಕೆಲವರು ಕೊಡಲ್ಲ. ಒಂದು ಮನೆ ಸಮೀಕ್ಷೆ ನಡೆಸಲು ಅರ್ಧಗಂಟೆ ಬೇಕಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಸಂಬಂಧಪಟ್ಟಂತೆ ಸುಮಾರು 40 ಪ್ರಶ್ನೆಗಳ ಉತ್ತರ ತುಂಬಬೇಕು. ಇದಕ್ಕೆಲ್ಲಾ ಸಮಯ ಹಿಡಿಯುತ್ತದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರ ಅನುಭವದ ಮಾತು.

ಹಳ್ಳಿಗಳಲ್ಲಿ ಕನಿಷ್ಠ ಶಿಕ್ಷಕರು ಎನ್ನುವುದಕ್ಕಾದರೂ ಗೌರವ ಕೊಡುತ್ತಾರೆ. ಆದರೆ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮನೆಗಳೂ ಹೆಚ್ಚು, ಇಲ್ಲಿನ ಯಾರನ್ನೂ ನಂಬುವುದಿಲ್ಲ. ಹೀಗಾಗಿ ಗಣತಿ ಮಾಡುವುದು ಕಷ್ಟ ಎನ್ನುವುದು ಸಮೀಕ್ಷಕರ ಅಳಲು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನಾಯಕನಿದ್ದರೆ ಸಮುದಾಯಕ್ಕೆ ಬಲ, ಸಿದ್ದು ಪರ ಪುತ್ರ ಯತೀಂದ್ರ ಅಬ್ಬರದ ಭಾಷಣ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ತಲಾ ಆದಾಯದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲು: ಸಿದ್ದರಾಮಯ್ಯ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments