Select Your Language

Notifications

webdunia
webdunia
webdunia
webdunia

ಜಾತಿ ಗಣತಿ ನಡೆಸುತ್ತಿರುವುದು ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕಾ: ವಿಜಯೇಂದ್ರ

CM Siddaramaiah

Sampriya

ಬೆಂಗಳೂರು , ಸೋಮವಾರ, 6 ಅಕ್ಟೋಬರ್ 2025 (16:47 IST)
ಬೆಂಗಳೂರು: ಜಾತಿಗಣತಿ ನಡೆಸುತ್ತಿರುವುದು ಜನರ ಹಿತ ಕಾಯುವುದಕ್ಕೋ ಅಥವಾ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೋ ಎಂಬುದನ್ನು ಖುದ್ದು ಸಿದ್ದರಾಮಯ್ಯ ಅವರೇ ತಿಳಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಈ ಬಗ್ಗೆ  ಬಿಜೆಪಿ ಸಾಮಾಜಿಕ ಜಾಲತಾನ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.  ಜಾತಿಗಣತಿ ನಡೆಸುತ್ತಿರುವುದು ಜನರ ಹಿತ ಕಾಯುವುದಕ್ಕೋ ಅಥವಾ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೋ ಎಂಬುದನ್ನು ಖುದ್ದು ಸಿದ್ದರಾಮಯ್ಯ ಅವರೇ ತಿಳಿಸಬೇಕು.

ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ರಾಜ್ಯ ಸರ್ಕಾರ ಜಾತಿಗಣತಿ ನಿರ್ಣಯ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ವಿಕಲಚೇತನರನ್ನೂ ಸಮೀಕ್ಷೆಗೆ ನಿಯೋಜಿಸಿರುವುದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಇನ್ನೊಂದು ಪೋಸ್ಟ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿದೆ. 

ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು" ಎಂಬುದಕ್ಕೆ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿಗಣತಿಯೇ ಸಾಕ್ಷಿ!!

ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ಮಹಾತ್ವಾಕಾಂಕ್ಷೆಯ ಜಾತಿಗಣತಿಗೆ ಡಿಸಿಎಂ @DKShivakumar
 ಅವರೇ ಅಪಸ್ವರ ತೆಗೆದಿದ್ದಾರೆ.

ಜಾತಿಗಣತಿ ನಡೆಸುತ್ತಿರುವುದು ಜನರ ಹಿತ ಕಾಯುವುದಕ್ಕೋ ಅಥವಾ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೋ ಎಂಬುದನ್ನು ಖುದ್ದು ಸಿದ್ದರಾಮಯ್ಯ ಅವರೇ ತಿಳಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇದಕ್ಕೆಲ್ಲ ತಲೆನೂ ಕೆಡಿಸಿಕೊಳ್ಳುವುದಿಲ್ಲ, ವಿಚಲಿತರಾಗುವುದಿಲ್ಲ: ಸಿಜೆಐ ಬಿಆರ್ ಗವಾಯಿ