Publish Date: Mon, 21 Jan 2019 (16:11 IST)
Updated Date: Mon, 21 Jan 2019 (16:13 IST)
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿಯೇ ಶಿಕ್ಷಕರು ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ನಡೆದಿದೆ.
ಕೋಲಾರದ ಮಾಲೂರಿನ ಬಿಇಓ ಕಚೇರಿಯಲ್ಲಿ ಶಿಕ್ಷಕರ ಗಲಾಟೆ, ಹಲ್ಲೆ ಪ್ರಕರಣ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯೇ ಈ ಘಟನೆ ನಡೆದಿದೆ.
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಹಲ್ಲೆಗೊಳಗಾದ ಶಿಕ್ಷಕನಾಗಿದ್ದಾನೆ. ಗುರುಭವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಬಿಇಓ ಮಾಧವರೆಡ್ಡಿ ಎದುರಲ್ಲಿಯೇ ಗುರು ಭವನ ನಡಾವಳಿ ಪುಸ್ತಕ ಕಚೇರಿಯಲ್ಲಿ ಇಡುವ ವಿಷಯ ಕುರಿತು ಗಲಾಟೆ ನಡೆದಿದೆ.
ಗಲಾಟೆಯಲ್ಲಿ ಎದೆಗೆ ಗಾಯವಾಗಿದೆ ಎಂದು ಮಾಲೂರು ಸರ್ಕಾರಿ ಆಸ್ಪತ್ರೆಗೆ ಶಿಕ್ಷಕ ನರಸಿಂಹ ದಾಖಲಾಗಿದ್ದಾರೆ.
ಬಿಇಓ ಆದೇಶಕ್ಕೂ ಕ್ಯಾರೆ ಎನ್ನದ ಶಿಕ್ಷಕರು, ಬಿಇಓ ಎದುರಲ್ಲಿಯೇ ಒಣ ಪ್ರತಿಷ್ಠೆಗಾಗಿ ಹೊಡೆದಾಡಿಕೊಂಡಿದ್ದಾರೆ.
ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.