Select Your Language

Notifications

webdunia
webdunia
webdunia
webdunia

ತೆರಿಗೆ ಕಟ್ಟದ ಮಂತ್ರಿ ಮಾಲ್: BBMP ಯಿಂದ ಮತ್ತೆ ಬಿತ್ತು ಬೀಗ

ತೆರಿಗೆ ಕಟ್ಟದ ಮಂತ್ರಿ ಮಾಲ್: BBMP ಯಿಂದ ಮತ್ತೆ ಬಿತ್ತು ಬೀಗ
bangalore , ಮಂಗಳವಾರ, 16 ನವೆಂಬರ್ 2021 (22:01 IST)
ಬಾಕಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್ʼಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತೆ ಬೀಗ ಜಡಿದಿದೆ.
ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಆಸ್ತಿ ತೆರಿಗೆ ಕಟ್ಟಿರಲಿಲ್ಲ.
22 ಕೋಟಿ ತೆರಿಗೆ ಬಾಕಿಯಿದ್ರು ಕೇರ್‌ ಮಾಡದ ಮಂತ್ರಿ ಮಾಲ್‌ಗೆ ಈ ಹಿಂದೆ ಒಮ್ಮೆ ಬೀಗ ಜಡಿಯಲಾಗಿತ್ತು. ಅದಾದ ಬಳಿಕ ಎಚ್ಚೆತ್ತುಕೊಂಡ ಮಂತ್ರಿ ಮಾಲ್ 5 ಕೋಟಿ ತೆರಿಗೆ ಸರ್ಕಾರಕ್ಕೆ ಸಂದಾಯ ಮಾಡಿತು. ಅಮೇಲೆ ಬಿಬಿಎಂಪಿ, ಪೂರ್ಣ ತೆರಿಗೆ ಸಂದಾಯಕ್ಕೆ ಮಂತ್ರಿಮಾಲ್‌ಗೆ ಸಮಾಯವಕಾಶವೂ ನೀಡಿತ್ತು. ಆದ್ರೆ, ಮತ್ತೆ ಮಂತ್ರಿ ಮಾಲ್‌ ತೆರಿಗೆ ಕಟ್ಟಲು ಹಿಂದೇಟು ಹಾಕಿದೆ. ಹಾಗಾಗಿ ಇಂದು ಮಾಲ್‌ಗೆ ಮತ್ತೆ ಬೀಗ ಜಡಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ ನವೆಂಬರ್‌ 18 ವರೆಗೆ ‘ಭಾರಿ ಮಳೆ’ ಎಚ್ಚರಿಕೆ