Select Your Language

Notifications

webdunia
webdunia
webdunia
webdunia

ತೆರಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ ನಟರಿಗೆ ನೋಟೀಸ್ !

ತೆರಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ ನಟರಿಗೆ ನೋಟೀಸ್ !
ಬೆಂಗಳೂರು , ಸೋಮವಾರ, 7 ಜನವರಿ 2019 (19:26 IST)
ಸ್ಯಾಂಡಲ್ ವುಡ್ ನಟ-ನಿರ್ಮಾಪಕರ ಮನೆಯ ಮೇಲಿನ ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ವಂಚನೆ ಪ್ರಕರಣ ಬಯಲಾಗಿರುವ ಹಿನ್ನೆಲೆಯಲ್ಲಿ ದಾಳಿಗೊಳಗಾದ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ನಟರಾದ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ವಿಜಯ್ ಕಿರಂಗದೂರ್, ಜಯಣ್ಣ ಹಾಗೂ ಸಿ. ಮನೋಹರ್ ಅವರುಗಳು ಆದಾಯ ತೆರಿಗೆ ಇಲಾಖೆ ಮುಂದೆ  ಹಾಜರಾಗುವ ಸಾಧ್ಯತೆಗಳಿವೆ.

ಮೂರು ದಿನಗಳ ಕಾಲ ನಟ-ನಿರ್ಮಾಪಕರ ಮನೆಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 21 ಸ್ಥಳಗಳಲ್ಲಿ 180ಕ್ಕೂ ಅಧಿಕ ಅಧಿಕಾರಿಗಳು ಶೋಧ ನಡೆಸಿ 109 ಕೋಟಿ ರೂ. ದಾಖಲೆ ಇಲ್ಲದ ಹಣ, ನಗದು, 25 ಕೆಜಿ ಚಿನ್ನ ಸೇರಿದಂತೆ ಅಪಾರ ಬೆಲೆ ಬಾಳುವ ದಾಖಲೆಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಹಿನ್ನೆಲೆಯಲ್ಲಿ ಎಲ್ಲ ನಟ-ನಿರ್ಮಾಪಕರಿಗೆ ವಿಚಾರಣೆಗೆ ಹಾಜರಾಗಿ ಆಸ್ತಿ-ಪಾಸ್ತಿ, ಆದಾಯದ ಮೂಲ, ತೆರಿಗೆ ಪಾವತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬರ ಅಧ್ಯಯನಕ್ಕೆ ಬಂದ ಸಚಿವರಿಗೆ ತರಾಟೆ