Publish Date: Sat, 05 Jan 2019 (19:00 IST)
Updated Date: Sat, 05 Jan 2019 (19:01 IST)
ಸಿನಿಮಾ ನಟರ ಮೇಲೆ ಐಟಿ ಅಧಿಕಾರಿಗಳು ತಮ್ಮ ದಿನಚರಿಯ ಮೇಲೆ ದಾಳಿ ಮಾಡಿದ್ದಾರೆ. ಅದು ಕೇಂದ್ರ ತೆರಿಗೆ ಇಲಾಖೆಯ ದಿನಚರಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವದು ಬೇಡ ಎಂದು ಮುಖ್ಯಮಂತ್ರಿ ಕುಮಾರಸ್ಬಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ವಂಚನೆ, ತೆರಿಗೆ ಮೇಲೆ ಅನುಮಾನ ಬಂದ್ರೆ ಆಗ ದಾಳಿ ಮಾಡುತ್ತಾರೆ ಎಂದರು.
ಪೆಟ್ರೋಲ್, ಡಿಸೇಲ್ ಬೆಲೆ ಕೇಂದ್ರ ಏನೂ ಇಳಿಸಿಲ್ಲ. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಇದೆ. ನಾವು ತೆರಿಗೆ ಏರಿಸಿದರೂ ನಮ್ಮ ಪಕ್ಕದ ರಾಜ್ಯಗಳಿಗೆ ಹೋಲಿಕೆ ನೋಡಿದ್ರೆ ಮತ್ತೆ ನಮ್ಮದೆ ಕಡಿಮೆಯಾಗುತ್ತೆ ಎಂದರು.
ಸಾರಿಗೆ ದರ ಎರಿಸಬೇಕು ಎನ್ನೋ ಬೇಡಿಕೆ ಇದೆ ಎಂದ ಅವರು, ಇನ್ನೊಮ್ಮೆ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.